ರವಿ ದಾತಾರ್ ಪ್ರಶಸ್ತಿ ಪ್ರದಾನ ನಾಳೆ

dr. sagar t s
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಹುಬ್ಬಳ್ಳಿ ಶಾಖೆಯ 29ನೇ ವಾರ್ಷಿಕೋತ್ಸವದ ನಿಮಿತ್ತ ಶಿಶಿರ ಶಿಲ್ಪ-ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಹಾಗೂ ರವಿ ದಾತಾರ್ ಪ್ರಶಸ್ತಿ ಪ್ರದಾನ ಸಮಾರಂಭ ಜ. 26ರಂದು ಮಧ್ಯಾಹ್ನ 2.30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಪ್ರದೀಪ ಭಟ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನ ವಿದ್ವಾನ್ ಡಾ. ಸಾಗರ ಟಿ.ಎಸ್. ಅವರಿಗೆ ರವಿ ದಾತಾರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯರಾದ ರಘುವೀರ ಮಡಗಾಂವಕರ ಅವರಿಗೆ ಸನ್ಮಾನ ಮಾಡಲಾಗುವುದು ಎಂದರು.

ಡಾ. ಸಾಗರ ಅವರು ತಿರುಚಿನಪಳ್ಳಿಯ ಭಾರತಿ ದಾಸನ್ ವಿವಿಯಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ, ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಲ್ಲಿ ಭರತನಾಟ್ಯ ಅಲಂಕಾರ ಶಿಕ್ಷಣವನ್ನು ಪೂರೈಸಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್​ನಲ್ಲಿ ಸ್ನಾತಕೋತ್ತರ ಪದವಿ, ಅರ್ಬನ್ ಆಂಡ್ ರಿಜನಲ್ ಪ್ಲ್ಯಾನಿಂಗ್​ನಲ್ಲಿ ಪಿಎಚ್.ಡಿ ಪಡೆದಿರುವ ಡಾ. ಸಾಗರ ಅವರು ದೇಶ-ವಿದೇಶಗಳಲ್ಲಿ 500ಕ್ಕೂ ಹೆಚ್ಚು ಭರತನಾಟ್ಯ ಪ್ರದರ್ಶನ ನೀಡಿದ್ದಾರೆ ಎಂದು ವಿವರಿಸಿದರು.

ಅತಿಥಿಗಳಾಗಿ ರಂಗಕರ್ವಿು ಶಶಿಧರ ನರೇಂದ್ರ, ಉದ್ಯಮಿಗಳಾದ ಶಿವರಾಮ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್ ಹಾಗೂ ಕಲಾವಿದರಿಂದ ಕೃಷ್ಣ ತುಲಾಭಾರ ನೃತ್ಯ ರೂಪಕ ಮೂಡಿಬರಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net