ರಾಯರಮಠದಲ್ಲಿ ವಿಶೇಷ ಭಜನೆ

h24-narayana parayana
Published on

ಹುಬ್ಬಳ್ಳಿ: ವೈಕುಂಠ ಏಕಾದಶಿ ನಿಮಿತ್ತ ಸತ್ತೂರಿನ ನಾರಾಯಣ ಪಾರಾಯಣ ಬಳಗದ ನಾರಾಯಣಿ ಭಜನಾ ಮಂಡಳಿ ವತಿಯಿಂದ ಇಲ್ಲಿಯ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತಾರತಮ್ಯ ಭಜನೆ ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.

ಶ್ರೀನಿವಾಸನ ಪಾತ್ರದಲ್ಲಿ ಅದ್ವೈತ ಸರದೇಶಮುಖ, ಕೋಲಾಟ, ನೃತ್ಯ, ಹರಿವಾಣ ಸೇವೆ ಮಾಡಿದರು.

ಡಾ. ನಾರಾಯಣ ಆಚಾರ್ಯ ಧೂಳಖೇಡ, ಗುರುರಾಜಾಚಾರ್ಯ ಸಾಮಗ, ಟಿಟಿಡಿ ಸಂಚಾಲಕ ಗೋಪಾಲ ಕುಲಕರ್ಣಿ, ಅಶ್ವಿನಿ ಬ್ಯಾಡಗಿ, ರಘೊತ್ತಮ ಅವಧಾನಿ, ಕೃಷ್ಣ ಹುನಗುಂದ, ವಾಮನ ಭಾದ್ರಿ, ಗುರುನಾಥ ಸರದೇಶಮುಖ ಇತರರು ಉಪಸ್ಥಿತರಿದ್ದರು.

ಅಭಿಯಾನ: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯಲ್ಲಿರುವ ಹನುಮಂತ ಪುರಾಣಿಕ ಅವರ ನಿವಾಸದಲ್ಲಿ ಭಗವದ್ಗೀತಾ ಅಭಿಯಾನ ನಿಮಿತ್ತ ಪಂಚಮೋಧ್ಯಾಯ-ಉಪನ್ಯಾಸ ಕಾರ್ಯಕ್ರಮ ಡಿ. 26ರಿಂದ 28ರವರೆಗೆ ಸಂಜೆ 5.30ರಿಂದ 6.30ರವರೆಗೆ ಏರ್ಪಡಿಸಲಾಗಿದೆ. ಡಾ. ನಾರಾಯಣ ಆಚಾರ್ಯ ಧೂಳಖೇಡ ಉಪನ್ಯಾಸ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net