

ಚಾಮರಾಜನಗರ: ಯುವಕರನ್ನು ಸಾಲಕ್ಕೆ ಸಿಲುಕಿ ಅವರ ಪ್ರಾಣಕ್ಕೆ ಕುತ್ತು ತರುವ ಆನ್‌ಲೈನ್ ರಮ್ಮಿ ಆ್ಯಪ್ ಅನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಬೇಕೆಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಒತ್ತಾಯಿಸಿದ್ದಾರೆ. ಈಗಾಗಲೇ ಯುವ ಜನಾಂಗ ಆನ್‌ಲೈನ್ ರಮ್ಮಿ ಆಡಿ ಸಾಲಗಾರರಾಗಿದ್ದಾರೆ. ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಯುವಜನರ ಹಿತದೃಷ್ಟಿಯಿಂದ ಆ್ಯಪ್ ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.