ರಮೇಶಬಾಬು ಯಾಳಗಿ ಸಾಹಿತ್ಯ ಸ್ಮಮೇಳನ ಅಧ್ಯಕ್ಷ

5 MANVI 01
ಮಾನ್ವಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ 10ನೇ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಬಾಬುಯಾಳಗಿಗೆ ಸಮ್ಮೇಳನಕ್ಕೆ ಔಪಚಾರಿಕ ಅಹ್ವಾನ ನೀಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ ಪಾಟೀಲ್, ಕೆ.ಇ.ವಿಜಯಲಕ್ಷ್ಮೀ, ಲಕ್ಷ್ಮಣರಾಯ್ ಕಪಗಲ್ ಇತರರಿದ್ದರು.
Published on

ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಫೆ.27ರಂದು ತಾಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಸಾಹಿತಿ, ಉಪನ್ಯಾಸಕ ರಮೇಶಬಾಬು ಯಾಳಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ ಪಾಟೀಲ್ ತಿಳಿಸಿದ್ದಾರೆ.

ಫೆ. 4 ರಂದು ಆಯೋಜಿಸಿದ್ದ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರ ಆಯ್ಕೆ, ಕಾರ್ಯಕ್ರಮಗಳ ಅಯೋಜನೆಗಾಗಿ ಸರ್ವಸದಸ್ಯರು ಉಪಯುಕ್ತವಾದ ಸಲಹೆಗಳನ್ನು ಸಭೆಯಲ್ಲಿ ನೀಡಿದ್ದಾರೆ ಎಂದರು. ಬಸವರಾಜ ಜಂಗಮರಹಳ್ಳಿ, ರಾಜಾ ಸುಭಾಷಚಂದ್ರ ನಾಯಕ, ಕೆ.ಇ.ವಿಜಯಲಕ್ಷ್ಮೀ, ಗೋಪಾಲನಾಯಕ, ಲಕ್ಷ್ಮಣರಾಯ್ ಕಪಗಲ್, ಸಲ್ಲಾವುದ್ದೀನ್, ಬಸವರಾಜ ಕನ್ನಾರಿ, ಶರಣಯ್ಯಸ್ವಾಮಿ, ಸಂತೋಷ ಹೂಗಾರ ಇನ್ನಿತರರಿದ್ದರು.

ಕವಿ ಗೋಷ್ಠಿಗೆ ಆಹ್ವಾನ: ಫೆ.27ರಂದು ನಡೆಯುವ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದು, ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಹೆಸರುಗಳನ್ನು ಫೆ. 9 ರೊಳಗೆ ಹೆಸರು ನೋಂದಾಯಿಸಬೇಕು.ಬಸವರಾಜ ಜಂಗಮರಹಳ್ಳಿ ಮೊ:96637 51236, ಗೋಪಾಲ ನಾಯಕ ಜೂಕೂರು ಮೊ: 88615 30805, ಹಷರ್ವರ್ಧನ್ ಮೊ: 95915 35351, ಇವರಲ್ಲಿ ಹೆಸರು ನೋಂದಾಯಿಸಲು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net