ರಮೇಶ ಡಾಕುಳಗಿ ಮರಳಿ ಕಾಂಗ್ರೆಸ್ ಸೇರ್ಪಡೆ

Capture1
Published on

ಹುಮನಾಬಾದ್: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಜೆಡಿಎಸ್ ತೊರೆದು ಶಾಸಕ ರಾಜಶೇಖರ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.

ಪಟ್ಟಣದ ಸಕರ್ಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾಕುಳಗಿ ಅವರಿಗೆ ಪಕ್ಷದ ಧ್ವಜ ಮತ್ತು ಸದಸ್ಯತ್ವ ಪ್ರಮಾಣಪತ್ರ ನೀಡಿ ಬರಮಾಡಿಕೊಂಡ ಶಾಸಕ ಪಾಟೀಲ್ ಮಾತನಾಡಿ, ಕಾಂಗ್ರೆಸ್ನಿಂದ ತಾಪಂ ಸದಸ್ಯ, ಐದು ವರ್ಷ ಅಧ್ಯಕ್ಷರಾಗಿದ್ದ ಡಾಕುಳಗಿ ಕೆಲ ತಿಂಗಳ ಹಿಂದೆ ನಮ್ಮ ಪಕ್ಷ ತೊರೆದು ಜೆಡಿಎಸ್ಗೆ ಸೇರಿದ್ದರು. ಸಾಮಾಜಿಕ ನ್ಯಾಯ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಹೀಗಾಗಿ ಈಗ ಸ್ವಇಚ್ಛೆಯಿಂದ ಮರಳಿ ಮನೆಗೆ ಬಂದಿದ್ದು, ಕಾಂಗ್ರೆಸ್ನಲ್ಲಿ ಮೊದಲಿನಂತೆಯೇ ಪ್ರೀತಿ, ಗೌರವ ದೊರೆಯಲಿದೆ ಎಂದರು.

ರಮೇಶ ಡಾಕುಳಗಿ ಮಾತನಾಡಿ, ರಾಜಕೀಯವಾಗಿ ಬೆಳೆದು ತಾಪಂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವುದರಲ್ಲಿ ಶಾಸಕ ಪಾಟೀಲ್ ಮತ್ತು ಕಾಂಗ್ರೆಸ್ನ ಪಕ್ಷದ ಪ್ರಮುಖರು, ಮತದಾರರ ಪಾತ್ರ ಎಂದಿಗೂ ಮರೆಯುವುದಿಲ್ಲ. ಕಾರಣಾಂತರಗಳಿಂದ ಜೆಡಿಎಸ್ಗೆ ಹೋಗಿದ್ದೆ. ಆದರೆ ಶಾಸಕ ರಾಜಶೇಖರ ಪಾಟೀಲರ ಕುಟುಂಬದ ಒಡನಾಟ ಮತ್ತು ಕಾಂಗ್ರೆಸ್ನಲ್ಲಿ ನಂಬಿಕೆಯಿಟ್ಟು ಮರಳಿ ಮನೆಗೆ ಬಂದ ಸಂತಸವಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪುರಸಭೆ ಅಧ್ಯಕ್ಷೆ ನೀತು ಶಮರ್ಾ, ಹಳ್ಳಿಖೇಡ ಪುರಸಭೆ ಮಾಜಿ ಅಧ್ಯಕ್ಷ ಮಹಾಂತಯ್ಯ ತೀರ್ಥ, ಬ್ಲಾಕ್ ಕಮಿಟಿ ಅಧ್ಯಕ್ಷ ಅಫ್ಸರ್ಮಿಯಾ, ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ರಡ್ಡಿ, ಪ್ರಮುಖರಾದ ಕಂಟೆಪ್ಪ ದಾನಾ, ಅಣ್ಣಾರಾವ ಪಾಟೀಲ್, ಪ್ರಭು ತಾಳಮಡಗಿ, ಲಕ್ಷ್ಮೀಪುತ್ರ ಮಾಳಗೆ, ಸುರೇಶ ಘಾಂಗ್ರೆ, ಹುಲೆಪ್ಪ ಪವಿತ್ರ, ಪ್ರಭು ಚಿತ್ತಕೋಟಾ, ಕೃಷ್ಣಪ್ಪ ಹಾಲಗೋಟರ್ೆ, ಪರಮೇಶ್ವರ ಪಾಟೀಲ್, ವಿಠ್ಠಲರಾವ ಕಲ್ಯಾಣಿ ಇತರರಿದ್ದರು.

ಪಕ್ಷ ಸೇರ್ಪಡೆ ಹಿನ್ನೆಲೆಯಲ್ಲಿ ಶಾಸಕ ಪಾಟೀಲ್ ಮನೆ ಹತ್ತಿರದಿಂದ ಅಂಬೇಡ್ಕರ್ ವೃತ್ತದ ಮೂಲಕ ನೌಕರರ ಭವನವರೆಗೆ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net