ರಮೇಶ ಜಾರಕಿಹೊಳಿ ಅವರನ್ನು ಬಂಧಿಸಿ, ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಆಗ್ರಹ

IMG-20210329-WA0045
Published on

ವಿಜಯಪುರ: ರಮೇಶ ಜಾರಕಿಹೊಳಿ ಅವರನ್ನು ಬಂಧಿಸದೇ ಸರ್ಕಾರ ಬಂಡತನ ಪ್ರದರ್ಶನ ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಆಪಾದಿಸಿದರು.

ಸಿಡಿ ಪ್ರಕರಣದಲ್ಲಿ ನೊಂದ ಯುವತಿ ರಮೇಶ ಜಾರಕಿಹೊಳಿ ಮೇಲೆ‌ ನೇರ ಆರೋಪ ಮಾಡುತ್ತಿದ್ದಾರೆ. ತಮ್ಮ ಪಾಲಕರ ಮೇಲೆ ಒತ್ತಡ ಹೇರಿ ದೂರು ಕೊಡಿಸಿದ್ದಾರೆಂದು ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಮಾತ್ರವಲ್ಲ, ರಮೇಶ ಜಾರಕಿಹೊಳಿ ಮೇಲೆ ದೂರು ದಾಖಲಿಸಿದರೂ ಈವರೆಗೆ ಬಂಧಿಸದಿರುವುದು ಸರ್ಕಾರದ ಬಂಡತನವೇ ಸರಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆಕ್ಷನ್ 276 ರ ಪ್ರಕಾರ ರಮೇಶ ಜಾರಕಿಹೊಳಿ ಮೇಲೆ ಪ್ರಕರಣ ದಾಖಲಾಗಿದೆ‌. ಈ ಹಿಂದಿನ ಪ್ರಕರಣಗಳನ್ನು ಗಮನಿಸಿದರೆ ಈ ಸೆಕ್ಷನ್ ಅಡಿ ದಾಖಲಾದ ದೂರಿನ ಅನ್ವಯ ಯಾರೊಬ್ಬರೂ ಬಂಧನದಿಂದ ಹೊರಗುಳಿದಿಲ್ಲ. ಆದರೆ ರಮೇಶ ಜಾರಕಿಹೊಳಿ ಅವರನ್ನು ಬಂಧಿಸದೇ ಇರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ ಎಂದು ರಾಜು ಆಲಗೂರ ಹರಿಹಾಯ್ದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ. ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಆಲಗೂರ ಒತ್ತಾಯಿಸಿದರು.

ರಮೇಶ ಜಾರಕಿಹೊಳಿ ಅವರನ್ನು ತಕ್ಷಣಕ್ಕೆ ಬಂಧಿಸಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಲಗೂರ ಆಗ್ರಹಿಸಿದರು.

ಮುಖಂಡರಾದ ಹಮೀದ್ ಮುಶ್ರೀಫ್, ಚಾಂದಸಾಬ ಗಡಗಲಾವ, ಸುರೇಶ ಗೊಣಸಗಿ, ಇರ್ಫಾನ್ ಶೇಕ್, ವಸಂತ ಹೊನಮೊಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net