ರಮೇಶ ಕತ್ತಿಗೆ ಸಚಿವ ಸ್ಥಾನ ನೀಡಿ

0102
Published on

ಹುಕ್ಕೇರಿ: ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಕೂಡಲೇ ಸಂಪುಟ ದರ್ಜೆ ಸಚಿವರನ್ನಾಗಿ ನೇಮಿಸಬೇಕು ಎಂದು ಅಂಬೇಡ್ಕರ್​ ಜನಜಾಗೃತಿ ವೇದಿಕೆ ಹಾಗೂ ವಿವಿಧ ದಲಿತಪರ ಸಂಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಉಮೇಶ ಕತ್ತಿ ಅಕಾಲಿಕ ನಿಧನದಿಂದ ತೆರವಾದ ಸಚಿವ ಸ್ಥಾನಕ್ಕೆ ಅವರ ಸಹೋದರ ರಮೇಶ ಕತ್ತಿ ಅವರನ್ನು ಶ್ರೀವೇ ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಬೇಕು ಎಂದು ಒಕ್ಕೊರಲದಿಂದ ಆಗ್ರಹಿಸಿದರು.
ಚಿಕ್ಕೋಡಿ ಲೋಕಸಭೆ ೇತ್ರದಿಂದ ಒಂದು ಬಾರಿ ರಮೇಶ ಕತ್ತಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ಜಿಲ್ಲೆಯ ಡಿಸಿಸಿ ಬ್ಯಾಂಕ್​ ಸೇರಿ ವಿವಿಧ ಸಂ&ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಹಕಾರಿ ೇತ್ರದಲ್ಲೂ ಛಾಪು ಮೂಡಿಸಿದ್ದಾರೆ ಎಂದರು.

ಹುಕ್ಕೇರಿ ಹೊರವಲಯದ ಕ್ಯಾರಗುಡ್ಡ ಬಳಿ ಸುಮಾರು 5 ಎಕರೆ ಪ್ರದೇಶದಲ್ಲಿ ಉಮೇಶ ಕತ್ತಿ ಅವರ ಸ್ಮಾರಕ ನಿರ್ಮಿಸಿ, ಜೀವನಾಧಾರಿತ ಚರಿತ್ರೆ, ರಾಜಕೀಯ ಪಯಣ, ನಾಡಿಗೆ ಮತ್ತು ೇತ್ರಕ್ಕೆ ಕೊಟ್ಟ ಕೊಡುಗೆ ಪ್ರದರ್ಶಿಸಬೇಕು. ಹಿಡಕಲ್​ ಡ್ಯಾಂನಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್​ ಉದ್ಯಾನಕ್ಕೆ ಉಮೇಶ ಕತ್ತಿ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ಸಂಟನೆ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಜಿಲ್ಲಾಧ್ಯಕ್ಷ ದಿಲ್​ೀ ಹೊಸಮನಿ, ಶ್ರೀನಿವಾಸ ವ್ಯಾಪಾರಿ, ಕೆಂಪಣ್ಣ ಶಿರಹಟ್ಟಿ, ಮಂಜು ಮರಡಿ, ಪಿಂಟು ಸೂರ್ಯವಂಶಿ, ಲಕ್ಷ$್ಮಣ ಹೂಲಿ, ಮಂಜು ಪಡದಾರ, ಚಿದು ಹಿರೆಕೆಂಚನ್ನವರ, ನಾಗೇಶ ವಾಳವಿ, ಗಂಗಾರಾಮ ಹುಕ್ಕೇರಿ, ಮಲ್ಲು ಕುರಣಿ, ಬಾಹುಸಾಬ ಪಾಂಡ್ರೆ, ಸುನಿಲ ಖಾತೆದಾರ, ಓಂಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net