

ಬೀಳಗಿ: ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಸದೃಢವಾಗಲಿದೆ ಎಂದು ಕುಂದರಗಿಯ ಜೆಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡ ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ 2023ನೇ ಸಾಲಿನ ಕ್ರೀಡಾಕೂಟ ಹಾಗೂ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅಂಕಗಳಿಗೆ ಮಾತ್ರ ಸೀಮಿತಗೊಳ್ಳಬಾರದು. ಇತರ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ಎಂ.ಎನ್.ಪಾಟೀಲರು ಅತಿ ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡಬೇಕು ಎಂಬ ಛಲದಿಂದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಮಕ್ಕಳ ಮಸ್ತಕದಲ್ಲಿ ಜ್ಞಾನ ಜ್ಯೋತಿ ಬೆಳೆಸುತ್ತಿದ್ದಾರೆ. ಅಲ್ಲದೆ, ಶಿಕ್ಷಣ ಜತೆಗೆ ಸಾಮಾಜಿಕ, ಸಹಕಾರ ಮತ್ತು ರಾಜಕೀಯ ರಂಗದಲ್ಲಿ ತೊಡಗಿದ್ದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದರು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸಿದ್ದಪ್ಪ ಬಿದರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ವ್ಯಕ್ತಿಯ ಪಾತ್ರ ಮತ್ತು ವ್ಯಕ್ತಿತ್ವವನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ಇದು ಖಂಡಿತವಾಗಿಯೂ ದೇಹವನ್ನು ಸದೃಢವಾಗಿಡಲು ಅತ್ಯುತ್ತಮ ಸಾಧನವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗೂ ಸ್ವಲ್ಪ ಸಮಯ ಮೀಸಲಿಡಬೇಕು ಎಂದರು.
ಸಂಸ್ಥೆ ನಿರ್ದೇಶಕರಾದ ರಾಜು ಬೋರ್ಜಿ, ಡಿ.ಪಿ.ಅಮಝರಿ, ಸಂತೋಷ ಜಂಬಗಿ, ಡಿ.ಎನ್.ಪಾಟೀಲ, ಆರ್.ಎಸ್.ಪಾಟೀಲ, ಜಿ.ಜಿ.ದೀಕ್ಷಿತ, ಸುಜಾತಾ ಹಿರೇನಿಂಗಪ್ಪನ್ನವರ, ವಿವೇಕಾನಂದ ಪಾಟೀಲ, ವಿಠ್ಠಲ ನಿಂಬಾಲ್ಕರ್, ಅಜ್ಜುಗೌಡ ಪಾಟೀಲ, ಶೈಕ್ಷಣಿಕ ನಿರ್ದೇಶಕ ಡಿ.ಎಸ್.ಕುಂಠೆ, ಆಡಳಿತಾಧಿಕಾರಿ ಶಂಕರಗೌಡ ಪಾಟೀಲ, ಪ್ರಾಚಾರ್ಯ ಜಿ.ಅರ್.ಪಾಟೀಲ, ವಿಐಪಿ ಸ್ಕೂಲ್ ಪ್ರಾಚಾರ್ಯ ಎಸ್.ಎಂ.ಕಲಬರ್ಗಿ ಇತರರಿದ್ದರು.