

ರಬಕವಿ/ಬನಹಟ್ಟಿ: ತಾಲೂಕು ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಂಡು ಫುಲ್ ಗರಂ ಆದ ಶಾಸಕ ಸಿದ್ದು ಸವದಿ ಮೇಲಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿ, ಶೀಘ್ರ ವೈದ್ಯ ಹಾಗೂ ಸಿಬ್ಬಂದಿ ನೇಮಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು
ಬನಹಟ್ಟಿಯ ಪಶು ಆಸ್ಪತ್ರೆಯಲ್ಲಿ `ಪಶು ಸಂಜೀವಿನಿ' ವಾಹನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು
ಶಸ್ತ್ರ ಚಿಕಿತ್ಸೆ ಘಟಕ ಸೇರಿ ವಿವಿಧ ಆರೋಗ್ಯ ಸೇವೆ ಹೊಂದಿರುವ ಪಶು ಸಂಜೀವಿನಿ ವಾಹನ ಈ ಭಾಗದ ರೈತರ ಜಾನುವಾರುಗಳಿಗೆ ವರವಾಗಲಿದೆ. ಗೋವಿನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಪಶು ಚಿಕಿತ್ಸಾಲಯಕ್ಕೆ ಸಾಗಣೆ ಮಾಡಲು ತೊಂದರೆಯಿದ್ದಲ್ಲಿ ೧೯೬೨ಕ್ಕೆ ರೈತರು ಕರೆ ಮಾಡಿದ್ದಲ್ಲಿ ಶಸ್ತç ಚಿಕಿತ್ಸೆಯ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ವಾಹನ ತಜ್ಞರೊಂದಿಗೆ ರೈತರ ಮನೆ ಬಾಗಿಲಿಗೆ ಹೋಗಿ ಸೌಕರ್ಯ ಒದಗಿಸಲಿದೆ ಎಂದರು
ಮುಖಂಡರಾದ ರಾಜು ಅಂಬಲಿ, ಮಲ್ಲಿಕಾರ್ಜುನ ಬಾನಕಾರ, ಧರೆಪ್ಪ ಉಳ್ಳಾಗಡ್ಡಿ, ಸಿದ್ದು ಗೌಡಪ್ಪನವರ, ಗೌರಿ ಮಿಳ್ಳಿ, ಭೀಮಶಿ ಪಾಟೀಲ, ಭೀಮಶಿ ಹಂದಿಗುಂದ, ಸ್ಥಾಯಿ ಸಮಿತಿ ಚೇರ್ಮನ್ ಸದಾಶಿವ ಪರೀಠ, ಈಶ್ವರ ಪಾಟೀಲ, ಯಲ್ಲಪ್ಪ ಕಟಗಿ ಸೇರಿದಂತೆ ಅನೇಕರಿದ್ದರು.