325 ಸದಸ್ಯರ ಆಯ್ಕೆಗಾಗಿ ಮತದಾನ

RBK 22-1
Published on

ರಬಕವಿ/ಬನಹಟ್ಟಿ: ತಾಲೂಕು ವ್ಯಾಪ್ತಿಯ 17 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 98 ಕ್ಷೇತ್ರಗಳ 325 ಸದಸ್ಯರ ಆಯ್ಕೆಗಾಗಿ 828 ಅಭ್ಯರ್ಥಿಗಳಿಗೆ ಮತದಾರರು ಮತ ಚಲಾಯಿಸಿದ್ದಾರೆ. ಹೊಲಗದ್ದೆಗಳಲ್ಲಿ ವಾಸವಿರುವವರನ್ನು ಅಭ್ಯರ್ಥಿಗಳು ಆಟೋ ಹಾಗೂ ಕಾರುಗಳಲ್ಲಿ ಕರೆ ತಂದು ಮತಹಾಕಿಸಿದರು. ಮತದಾನ ಮಾಡಿದ ಬಳಿಕ ಗ್ರಾಮೀಣ ಭಾಗದ ಹೊಟೇಲ್‌ಗಳಲ್ಲಿ ಭಜಿ, ಛೋಡಾ, ಚಹಾ ವ್ಯವಸ್ಥೆ ಮಾಡಲಾಗಿತ್ತು. ಮತದಾನ ನಂತರ ಸಂಜೆ ಎಲ್ಲ ಮತಪೆಟ್ಟಿಗೆಗಳನ್ನು ಬನಹಟ್ಟಿಯ ಜನತಾ ಶಿಕ್ಷಣ ಸಂಸ್ಥೆಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net