

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ರಪ್ತು ಚಟುವಟಿಕೆ ಉತ್ತೇಜಿಸಲು ಕೈಗಾರಿಕೋದ್ಯಮಿಗಳು ಕ್ರಿಯಾಶೀಲರಾಗಿ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರಿನಿವಾಸ್ ಸಲಹೆ ನೀಡಿದರು.
ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಹಭಾಗಿತ್ವದಲ್ಲಿ ಕ್ಲಾರ್ಕ್ ಎಕ್ಸೊಟಿಕಾ ರೆಸಾರ್ಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಣಿಜ್ಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ಉದ್ದಿಮೆದಾರರು ಹೆಚ್ಚು ರಫ್ತು ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸರ್ಕಾರ ಅನೇಕ ಸವಲತ್ತು ನೀಡಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ 100ಕ್ಕೂ ಹೆಚ್ಚಿನ ಕೈಗಾರಿಕೆಗಳು ರಫ್ತು ಚಟುವಟಿಕೆ ನಡೆಸುತ್ತಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಿದೆ. ಇದು ಮತ್ತಷ್ಟು ಹೆಚ್ಚಾಗಿ ದೇಶದ ಆರ್ಥಿಕ ಸ್ಥಿತಿಬಲಪಡಿಸುವತ್ತ ಸಾಗಬೇಕು ಎಂದರು.
ಸ್ಥಳೀಯ ಸಂಪನ್ಮೂಲ ಬಳಕೆ: ದೊಡ್ಡಬಳ್ಳಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ಗುಲಾಟಿ ಮಾತನಾಡಿ, ಜಿಲ್ಲೆಯಲ್ಲಿರುವ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಹೆಚ್ಚು ಕೈಗಾರಿಕೆ ಸ್ಥಾಪಿಸುವುದು ಮತ್ತು ಅದನ್ನು ರಫ್ತು ಚಟುವಟಿಕೆಯಾಗಿ ಅಭಿವೃದ್ಧಿಪಡಿಸಿ, ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಲು ಸಹಕರಿಸಬೇಕಿದೆ ಎಂದರು.
ಉದ್ಯೋಗವಕಾಶ ದೊರಕಬೇಕು: ವಾಣಿಜ್ಯ ಸಪ್ತಾಹದಲ್ಲಿ ಭಾಗವಹಿಸಿರುವ ಕೈಗಾರಿಕೋದ್ಯಮಿಗಳು ಮತ್ತು ರಫ್ತುದಾರರು ಸರ್ಕಾರ ಒದಗಿಸಿರುವ ವಿವಿಧ ಯೋಜನೆಗಳ ಸೌಲಭ್ಯ ಪಡೆದು ಉತ್ತಮ ಚಟುವಟಿಕೆ ರೂಪಿಸಬೇಕು ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವತ್ತ ಕಾರ್ಯಪ್ರವೃತ್ತವಾಗಬೇಕು, ಉದ್ಯೋಗ ಸಮಸ್ಯೆ ನಿವಾರಣೆಗೆ ಎಲ್ಲ ಕೈಗಾರಿಕೊದ್ಯಮಗಳು ಮುಂದಾಗಬೇಕು ಎಂದು ದಾಬಸ್‌ಪೇಟೆ ಕೈಗಾರಿಕಾ ಸಂಘದ ಅಧ್ಯಕ್ಷ ಎಸ್.ಕಂಠಪ್ಪ ಮನವಿ ಮಾಡಿದರು.
ಹೊಸಕೋಟೆ ಕೈಗಾರಿಕಾ ವೆಲ್‌ಫೇರ್ ಫೋರಂ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ವಾಣಿಜ್ಯ ಸಪ್ತಾಹವು ಎ್ಲ ಉದ್ದಿಮೆದಾರರಿಗೆ ಅವಕಾಶ ಕಲ್ಪಿಸಿದ್ದು, ಎಲ್ಲರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಎ್ಕೆಸಿಸಿಐ ಹಾಗೂ ಸಿಎಂಡಿಸಿವಿಎನ್‌ವಿರೋ ಸಿಸ್ಟಮ್ ಮಾಜಿ ಅಧ್ಯಕ್ಷ ಡಾ. ಜಾಕೋಬ್ ಕ್ರಾಸ್ಟ ಮಾತನಾಡಿ, ದೇಶದ ರಕ್ಷಣಾ ಕ್ಷೇತ್ರದಲ್ಲಿರುವ ಮಿಸೈಲ್, ವಿಕ್ರಮ್, ಅಗ್ನಿ ಮತ್ತು ಇತರೆ ದೇಶದ ರಕ್ಷಣಾ ಉತ್ಪನ್ನಗಳನ್ನು ಈ ಸಂಸ್ಥೆ ಮೂಲಕ ಪ್ರದರ್ಶನ ಮಾಡಿರುವುದು ಹೆಮ್ಮೆಯ ವಿಷಯ. ಕಂಪನಿ ಉತ್ಪನ್ನಗಳನ್ನು ದೇಶದ ರಕ್ಷಣೆಗೆ ಮೀಸಲಿಡುವಂತಾಗಬೇಕು ಎಂದು ಆಶಿಸಿದರು.