

ವಿಜಯಪುರ: ಇಂಡಿಯಾ ರಿಸರ್ವ್ ಬಟಾಲಿಯನ್ ವತಿಯಿಂದ ಬುಧವಾರ ಆಯೋಜಿಸಿದ್ದ ರನ್ ಫಾರ್ ಫಿಟ್ ಇಂಡಿಯಾಗೆ
ಕೆಎಸ್ಆರ್ಪಿ ಎಡಿಜಿಪಿ ಅಲೋಕಕುಮಾರ ಹಸಿರು ನಿಶಾನೆ ತೋರಿಸೋ ಮೂಲಕ ಚಾಲನೆ ನೀಡಿದರು.
ಐತಿಹಾಸಿಕ ಗೋಲಗುಮ್ಮಟ ಆವರಣದಿಂದ ಆರಂಭವಾದ ರನ್ ಫಾರ್ ಪಿಟ್ ಇಂಡಿಯಾ ಓಟ, ನಗರದ ಪ್ರಮುಖ ರಸ್ತೆಗಳ ಮೂಲಕ ಬಿಎಲ್ ಡಿ ಇ ಕ್ಯಾಂಪಸ್ ವರೆಗೂ ಸಾಗಿತು.
ಇನ್ನು ಈ ರನ್ ಓಟದಲ್ಲಿ ಐಆರ್ ಬಿ ಪೊಲೀಸ್, ವಿಜಯಪುರ ಜಿಲ್ಲಾ ಪೊಲೀಸ್, ಪೊಲೀಸರ ತರಬೇತಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕರಾಟೆ ಅಸೋಸಿಯೇಷನ್ ನವರು ಸುಮಾರು 500 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.