ರಥಯಾತ್ರೆಗೆ ಅದ್ದೂರಿ ಸ್ವಾಗತ

27Anand2e
ನಗರಕ್ಕೆ ಭಾನುವಾರ ಆಗಮಿಸಿದ ಅನುಭವ ಮಂಟಪ ಬಸವಾದಿ ಶರಣರ ವೆಭವ ರಥಯಾತ್ರೆಗೆ ಜಿಲ್ಲಾಡಳಿತದಿಂದ ಸ್ವಾಗತಿಸಲಾಯಿತು. ಮಂಗೇಶ ಪವಾರ, ವಾಣಿ ಜೋಶಿ, ವಿಜಯಕುಮಾರ ಹೊನಕೇರಿ, ಉದಯಕುಮಾರ ತಳವಾರ, ವಿದ್ಯಾವತಿ ಭಜಂತ್ರಿ ಇತರರಿದ್ದರು.
Published on

ಬೆಳಗಾವಿ: ನಗರದ ಕಿತ್ತೂರು ರಾಣಿ ಚನ್ನಮ್ಮ ವತ್ತದಲ್ಲಿ "ಅನುಭವ ಮಂಟಪ ಬಸವಾದಿ ಶರಣರ ವೆಭವ ರಥಯಾತ್ರೆ'ಯನ್ನು ಭಾನುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಕನ್ನಡ ಮತ್ತು ಸಂಸತಿ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಕೂಡಲ ಸಂಗಮ ಅಭಿವದ್ಧಿ ಪ್ರಾಧಿಕಾರ ಸಹಯೋಗದಲ್ಲಿ "ಅನುಭವ ಮಂಟಪ&ಬಸವಾದಿ ಶರಣರ ವೆಭವ ರಥಯಾತ್ರೆ' ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಂಸತಿಕ ನಾಯಕ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನೊಳಗೊಂಡ ಅನುಭವ ಮಂಟಪದಲ್ಲಿ ಭಗವಾನ್​ ಗೌತಮ ಬುದ್ಧ, ಗುರುನಾನಕ್​ ಹಾಗೂ ಶಿವಶರಣೆ ಅಕ್ಕ ಮಹಾದೇವಿ ಮೂರ್ತಿ ನೋಡುಗರ ಕಣ್ಣಿಗೆ ಮೆರುಗು ತಂದವು.

ಮಹಾಪೌರ ಮಂಗೇಶ್​ ಪವಾರ, ಉಪ ಮಹಾಪೌರ ವಾಣಿ ಜೋಶಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಗಣ್ಯರು, ಬಸವ ಶರಣರ ಅನುಯಾಯಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net