ರಥದ ಚಕ್ರದಲ್ಲಿ ಸಿಲುಕಿ ಸಾವು

KLB laxmikanth
ಲಕ್ಷ್ಮೀಕಾಂತ
Published on

ಶಹಾಬಾದ್: ರಥದ ಚಕ್ರದಲ್ಲಿ ಸಿಲುಕಿ ಭಕ್ತನೋರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ರಾವೂರು ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ.
ಗ್ರಾಮದ ಲಕ್ಷ್ಮೀಕಾಂತ ಕೆಸಬಳ್ಳಿ (25) ಸ್ಥಳದಲ್ಲಿಯೇ ಮೃತಪಟ್ಟ ದುದೈವಿ. ಭೀಮಾಶಂಕರ ಪೂಜಾರಿ (29), ಯಂಕಪ್ಪ ನೆಡಲ್ (25) ಅವರಿಗೆ ಗಾಯಗಳಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕರೊನಾ ಮಹಾಮಾರಿಯಿಂದ ಎರಡು ವರ್ಷ ಜಾತ್ರೋತ್ಸವ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಅದ್ದೂರಿ ಉತ್ಸವ ಆಯೋಜಿಸಿದ್ದರು. ಸಹಸ್ರಾರು ಭಕ್ತರ ಮಧ್ಯೆ ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜೈ ಘೋಷಗಳ ಮಧ್ಯೆ ಭಕ್ತರು ರಥವನ್ನು ಎಳೆದರು. ಸ್ವಲ್ಪ ದೂರ ಹೋದ ನಂತರ ಥೇರು ರಸ್ತೆ ಬಿಟ್ಟು ಹೋಗುತ್ತಿತ್ತು. ಇದನ್ನು ಕಂಡು ಕೆಲವರು ರಥವನ್ನು ಹಿಂದಕ್ಕೆ ಎಳೆದಿದ್ದಾರೆ. ಈ ವೇಳೆ ಅಲ್ಲೆ ರಥದ ಪಕ್ಕದಲ್ಲಿ ಲಕ್ಷ್ಮೀಕಾಂತ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಭಕ್ತರು ಜೋರಾಗಿ ಥೇರನ್ನು ಎಳೆದಿದ್ದು, ದೊಡ್ಡ ಗಾತ್ರದ ಚಕ್ರದಲ್ಲಿ ಸಿಲುಕಿ ಸ್ಥಳದಲ್ಲೇ ಲಕ್ಷ್ಮೀಕಾಂತ ಮೃತಪಟ್ಟಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net