ರಥ ಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ

04Rajesh7
Published on

ಚಾಮರಾಜನಗರ: ರಥ ಸಪ್ತಮಿ ಅಂಗವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಜಿಲ್ಲೆಯಲ್ಲಿ ರಥ ಸಪ್ತಮಿ ಪ್ರಯುಕ್ತ ಪ್ರತಿ ವರ್ಷ ಮುಂಜಾನೆ ಯೋಗಾಭ್ಯಾಸ ಮಾಡಲಾಗುತ್ತದೆ. ಚಾಮರಾಜನಗರ, ಕೊಳ್ಳೇಗಾಲ ತಾಲೂಕಿನಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಇತರೆ ಸಂಘ-ಸಂಸ್ಥೆಗಳ ವತಿಯಿಂದ ಯೋಗಾಭ್ಯಾಸ ಮಾಡಲಾಯಿತು. ಶಿಕ್ಷಣ ಸಂಸ್ಥೆಗಳು, ಯೋಗ ಕೇಂದ್ರಗಳಲ್ಲಿ ಸೂರ್ಯ ನಮಸ್ಕಾರ ಮಾಡಿ ಇದರ ಮಹತ್ವವನ್ನು ತಿಳಿಸಿಕೊಡಲಾಯಿತು.

ಸೇವಾ ಭಾರತಿಯಲ್ಲಿ ಕಾರ್ಯಕ್ರಮ: ನಗರದ ಸೇವಾ ಭಾರತಿ ಶಾಲೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಸೇವಾಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ 108 ಸೂರ್ಯ ನಮಸ್ಕಾರ ಮಾಡಲಾಯಿತು.

ಮಂಗಳವಾರ ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಯೋಗಾಸಕ್ತರು ಮತ್ತು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಊದ್ವಾಸನ, ಉತ್ತಾನಾಸನ, ಏಕ ಪಾದ ಪ್ರಸರಣಾಸನ, ಅದೋಮುಖ ಶ್ವಾನಾಸನ, ಭುಜಂಗಾಸನ ಮತ್ತು ಇತರೆ ಆಸನಗಳನ್ನು ಮಾಡಿದರು. ಯೋಗಾಭ್ಯಾಸದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಶ್ರೀಪತಂಜಲಿ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲ ನಿಜಗುಣ ಅವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು 108 ಸೂರ್ಯ ನಮಸ್ಕಾರ ಮಾಡಿದರು.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಜಗತ್ತಿಗೆ ಬೆಳಕು ಕೊಡುವ ಸೂರ್ಯನಿಗೆ ನಮಸ್ಕಾರ ಮಾಡುವುದು ಒಂದಕ್ಕಿಂತ ಹೆಚ್ಚು ಸಕ್ರಿಯವಾಗುತ್ತವೆ. ಸೂರ್ಯ ನಮಸ್ಕಾರ ಎಂದರೆ ದೇವರಿಗೆ ಪೂಜೆ ಸಲ್ಲಿಸುವ ವಿಧಾನವಿದ್ದಂತೆ. ಇದನ್ನು ವಿಶ್ವದ ಅತ್ಯುತ್ತಮ ಯೋಗಾಭ್ಯಾಸವೆಂದು ಪರಿಗಣಿಸಲಾಗುತ್ತದೆ. 12 ಆಸನಗಳ ಭಂಗಿಯೇ ಸೂರ್ಯ ನಮಸ್ಕಾರ. ಸೂರ್ಯನನ್ನು ದೇವರಂತೆ ಕಾಣುತ್ತಿವೆ. ಸೃಷ್ಟಿಯಲ್ಲಿ ದೈವತ್ವವಿದೆ ಎಂದರು.

ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್ ಗುರೂಜಿ ಮಾತನಾಡಿ, ಉತ್ತಮ ಆರೋಗ್ಯವನ್ನು ಹೊಂದಲು ಯೋಗಾಸನ ಮಾಡಬೇಕು. ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಯೋಗ ಮುಖ್ಯಶಿಕ್ಷಕ ಅಜಿತ್, ಶ್ರೀಕಾಂತ್, ನಂದಿನಿ, ಶಾಂತ, ರಾಧ, ಅಶ್ವಿನಿ, ನಂದಿನಿ, ಸುರೇಶ್, ಲೋಕೇಶ್, ವಿಶ್ವ, ಸಿ.ಎಂ.ವೆಂಕಟೇಶ್, ವೀರೇಶ್ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net