

ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತೆ ರತ್ನಮ್ಮ ಶಂಭುನಾಯಕ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು. ನೀರಾವರಿ ಇಲಾಖೆ ಇಂಜಿನಿಯರ್ ಜನಾರ್ದನ್, ಪಿಡಿಒ ನಾಗೇಂದ್ರ, ಕಾರ್ಯದರ್ಶಿ ನಾಗರಾಜು, ಬಿಲ್ ಕಲೆಕ್ಟರ್ ಗುಂಡುರಾವ್, ಕಂಪ್ಯೂಟರ್ ಆಪರೇಟರ್ ಸಿದ್ದು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪಾಧ್ಯಕ್ಷೆ ಕೆ.ಆರ್.ಶೋಭಾ ಸುಂದರ್, ಸದಸ್ಯರಾದ ಲಕ್ಷ್ಮೀದೇವಿ, ಚಲುವಪ್ಪ, ಶೋಭಾ, ರಿತೀಶ್, ವಿಮಲಾ, ಚಿಕ್ಕರಾಜಶೆಟ್ಟಿ, ಕೆ.ಮಹದೇವಯ್ಯ, ಗೌರಮ್ಮ, ಕೆಂಪಾಲಮ್ಮ, ಮಹೇಶ, ಟಿ.ಕುಮಾರ, ಸವಿತಾ, ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ, ಪುರದಕಟ್ಟೆ ಬಸವರಾಜು, ಮುಖಂಡರಾದ ಬಸವಣ್ಣ, ಚಾಮನಾಯಕ, ಗಣೇಶ, ಚನ್ನನಾಯಕ , ಶಂಭುನಾಯಕ, ಸುಂದರ್ ಇತರರು ಹಾಜರಿದ್ದರು.