ರೈತರಿಗೆ ಅನ್ಯಾಯ ಆಗದು

D SUDAKAR D HYR
Published on

ಹಿರಿಯೂರು: ತಾಲೂಕಿನ ಮೇಟಿಕುರ್ಕೆ ಬಳಿ 1200 ಎಕರೆಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.

ದಲ್ಲಾಗಳಿಗೆ ಕಡಿವಾಣ ಹಾಕಲು, ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಮೊದಲಿಗೆ ಪತ್ರ ಬರೆಯಲಾಗಿತ್ತು. ಈಗ ಗೊಂದಲ ನಿವಾರಣೆಯಾಗಿದೆ. ಆದ್ದರಿಂದ ಕೈಗಾರಿಕೆ ವಲಯ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತೊಂದು ಬರೆದಿದ್ದೇನೆ.

ಭೂಮಿ ಸ್ವಾಧೀನ ಸಂದರ್ಭ ರೈತರಿಗೆ ಯಾವುದೇ ರೀತಿ ಅನ್ಯಾಯ ಆಗದಂತೆ ಕ್ರಮಕೈಗೊಳ್ಳಲಾಗುವುದು. ಕೈಗಾರಿಕೆ ಸ್ಥಾಪನೆ ಜಿಲ್ಲೆಯ ಜನತೆಗೆ ವರದಾನವಾಗಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net