

ಮೈಸೂರು: ಇಂದಿನ ದಿನದಲ್ಲಿ ಜನಪದ ಕಲೆ ನಶಿಸುತ್ತಿದ್ದು, ಅದನ್ನು ಉಳಿಸಿ ಬೆಳೆಸಬೇಕಿದೆ ಎಂದು ನಟ ಅನಿರುದ್ಧ ಅಭಿಪ್ರಾಯಪಟ್ಟರು.
ನಟನ ರಂಗಶಾಲೆಯಿಂದ ಆಯೋಜಿಸಿದ್ದ ‘ರಜಾಮಜಾ’ ಬೇಸಿಗೆ ಶಿಬಿರ ಅಂಗವಾಗಿ ಕುವೆಂಪುನಗರದ ಗಾನಭಾರತಿ ಆವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಶನಿವಾರದಿಂದ ಆಯೋಜಿಸಿರುವ ಎರಡು ದಿನಗಳ ಸಮಾರೋಪ, ಮಕ್ಕಳ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.
ನಮ್ಮ ಭಾರತೀಯ ಪರಂಪರೆಯನ್ನು ಕಟ್ಟಿ, ಬೆಳೆಸಿದ್ದಲ್ಲದೇ ಜನಪದವನ್ನು ಹಿರಿಯರು ಉಳಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಜನಪದ ಕಲೆ, ಸಾಹಿತ್ಯ, ಮೂಲದಾಟಿ ನಶಿಸಿ ಹೋಗುತ್ತಿದೆ. ಆದ್ದರಿಂದ ನೈಜ ಜಾನಪದವನ್ನು ಉಳಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಮಕ್ಕಳ ಬಾಲ್ಯದ ಬೆಳವಣಿಗೆಗೆ ರಂಗಭೂಮಿ ಬಹಳ ಉಪಂುುಕ್ತವಾದುದು. ಒಳ್ಳೆಂು ಶಿಕ್ಷಣ ಈಗ ಹೆಚ್ಚಿನ ಅಗತ್ಯವಿದ್ದು ಈ ತರಹದ ಶಿಬಿರಗಳು ಮನೋವಿಕಾಸಕ್ಕೆ ಸಹಕಾರಿಂಾಗಲಿದೆ. ಕಲೆ, ಸಾಹಿತ್ಯ, ಸಂಸ್ಕ ೃತಿ ಂುನ್ನು ಉಳಿಸುವ ನಿಟ್ಟಿನಲ್ಲಿ ಈ ರೀತಿ ಬೇಸಿಗೆ ಶಿಬಿರಗಳು ಈಗಿನ ಪೀಳಿಗೆಂು ಮಕ್ಕಳ ಸರ್ವತೋಮುಖ ಅಭಿವದ್ಧಿಗೆ ಸಹಕಾರಿಂಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಟ, ನಿರ್ದೇಶಕ ಮಂಡ್ಯ ರಮೇಶ, ಸುಪ್ರಿಂ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಗುಣವತಿ ಇತರರು ಇದ್ದರು.
ಬಳಿಕ ಮಕ್ಕಳಿಂದ ರಂಗಗೀತೆಗಳು, ರಂಗದ ಕುಣಿತ, ಪೌರಾಣಿಕ ಹಾಗೂ ಆಧುನಿಕ ರಂಗಭೂಮಿಂು ನಾಟಕಗಳು ಪ್ರದರ್ಶನ ಗೊಂಡವು.