

ಬೀದರ್: ತಾಲ್ಲೂಕಿನ ಮನ್ನಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಜನಿಕಾಂತ ಚಂದ್ರಪ್ಪ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಪ್ರೊ. ಶಾಂತಾ ಬಿ. ಅಷ್ಟಗಿ ಮಾರ್ಗದರ್ಶನದಲ್ಲಿ ‘ಓಲ್ಡ್ ಏಜ್ ಹೋಮ್ಸ್: ಎ ಸೋಸಿಯಾಲಾಜಿಕಲ್ ಸ್ಟಡಿ ಆಫ್ ಹೈದರಾಬಾದ್ ಕರ್ನಾಟಕ ರಿಜಿಯನ್’ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಗೆ ಮಾನ್ಯ ಮಾಡಿದೆ. ರಜನಿಕಾಂತ ಅವರಿಗೆ ಪಿಎಚ್.ಡಿ ಪದವಿ ಲಭಿಸಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.