ಬಳ್ಳಾರಿ :ಭೋವಿ ಸಮಾಜದದಿಂದ ಜು. 20 ರಂದು ಚಿತ್ರದುರ್ಗದಲ್ಲಿ ಶಿವಯೋಗಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ರಜತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಬೋವಿ(ವಡ್ಡರ) ಸಂಘದ ವತಿಯಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭೋವಿ ಸಮಾಜದ ಸ್ವಾಮೀಜಿಯಾಗಿ ದೀಕ್ಷೆ ಪಡೆದು ಇಪ್ಪತೈದು ವರ್ಷ ತುಂಬಿರುವುದವರಿಂದ ಕಾರ್ಯಕ್ರಮ ನಡೆಸಲಾಗುವುದು. ಇದರಲ್ಲಿ ಭೋವಿ ಸಮುದಾಯದ ಐಎಎಸ್, ಐಪಿಎಸ್, ಸಚಿವರು, ಶಾಸಕರು, ಸಂಸದರು ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಗುವುದು. ಸಿಎಂ ಸೇರಿದಂತೆ ವಿವಿಧ ಪಕ್ಷದ ರಾಜಕೀಯ ನಾಯಕರು, ಮಠಾಧೀಶರ ಕೂಡ ಭಾಗವಹಿಸಲಿದ್ದಾರೆ. ವಿವಿಧ ರಾಜ್ಯಗಳಿಂದ ಸೇರಿದಂತೆ ಒಟ್ಟಾರೆ ಐದರಿಂದ ಆರು ಲಕ್ಷ ಜನರು ಸೇರುವ ಸಂಭವಿದೆ. ಜಿಲ್ಲೆಯಿಂದ ಇಪ್ಪತ್ತರಿಂದ ಮೂವತ್ತು ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಶಿವಯೋಗಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜವನ್ನು ಸಂಸ್ಕಾರದೊಂದಿಗೆ ತಳಹದಿಯಿಂದ ಸಂಘಟಿಸಲಾಗಿದೆ. ಸಮುದಾಯದ ಪ್ರತಿಯೊಬ್ಬರನ್ನು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಸುಧಾರಿಸಲು ಎಲ್ಲ ರೀತಿಯ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕು ಎಂದು ಕರೆ ನೀಡಿದರು. ಪ್ರಮುಖರಾದ ಪಾಲಿಕೆ ಸದಸ್ಯ ಶ್ರೀನಿವಾಸಲು ಮಿಂಚು, ಜಿಲ್ಲಾಧ್ಯಕ್ಷ ವಿ. ರಾಮಾಂಜನಿ ಇದ್ದರು.