ರಜತ ಕವಚದ ಭವ್ಯ ಶೋಭಾಯಾತ್ರೆ

h15-Rajat 1
Published on

ಹುಬ್ಬಳ್ಳಿ: ನಗರದ ಸ್ಟೇಷನ್ ರಸ್ತೆಯ ಶ್ರೀ ಈಶ್ವರ ದೇವಸ್ಥಾನಕ್ಕೆ ರಜತ ಕವಚದ ಸಮರ್ಪಣೆ ಅಂಗವಾಗಿ ಶನಿವಾರ ಸಂಜೆ ಭವ್ಯ ಶೋಭಾಯಾತ್ರೆ ನಡೆಯಿತು.

ಹಳೇ ಕೋರ್ಟ್ ವೃತ್ತದ ಬಳಿಯ ಸಾಯಿಬಾಬಾ ಮಂದಿರದಿಂದ ಪ್ರಾರಂಭ ಗೊಂಡ ಮೆರವಣಿಗೆ ಲ್ಯಾಮಿಂಗ್ಟನ್ ರಸ್ತೆ ಮೂಲಕ ಶ್ರೀ ಈಶ್ವರ ದೇವಸ್ಥಾನ ತಲುಪಿತು. ವಿವಿಧ ಮಹಿಳಾ ಮಂಡಳಗಳ ಕುಂಭ ಹೊತ್ತ ಮಹಿಳೆಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಈಶ್ವರ, ಪಾರ್ವತಿ, ಗಣೇಶನ ವೇಷ ಧರಿಸಿದ್ದ ಭಕ್ತರು ಗಮನ ಸೆಳೆದರು. ಮುಕುಂದ ನಾತು, ಎಲ್.ಎ. ಓಕ, ಗುರುಪ್ರಕಾಶ ಕುಲಕರ್ಣಿ, ಉಮೇಶ ದುಶಿ, ವಸಂತ ನಾಡಜೋಶಿ, ಸಂತೋಷ ಚವ್ಹಾಣ, ಗೋಪಾಲ ಕುಲಕರ್ಣಿ, ಶಂಕರ ಪಾಟೀಲ, ಸುಭಾಸಸಿಂಗ್ ಜಮಾದಾರ, ಪ್ರಶಾಂತ ನಾತು, ವೀಣಾ ಹೆಗಡೆ, ಪದ್ಮಾ ಓಕ, ಭಾರತಿ ಪಾಟೀಲ, ಸುನೀಲ ಗುಮಾಸ್ತೆ, ಮುರಳಿ ಬಿಲ್ಲೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net