

ಕಂಪ್ಲಿ: ರಾಮಸಾಗರ ಗ್ರಾಮದ ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಹಾಸಂಸ್ಥಾನ ಶಾಖಾಮಠದಲ್ಲಿ ಶ್ರೀ ರಘುವಂದ್ಯ ತೀರ್ಥರ 608ನೇ ವರ್ಷದ ಮಧ್ಯಾರಾಧನಾ ಮಹೋತ್ಸವ ಭಾನುವಾರ ಶ್ರದ್ಧೆಯಿಂದ ನಡೆಯಿತು.
ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಪುಷ್ಪ ಅಲಂಕಾರ, ನೈವೇದ್ಯ, ತೀರ್ಥಪ್ರಸಾದ ವಿನಿಯೋಗವಾಯಿತು. ಬೃಂದಾವನವನ್ನು ಪುಷ್ಪಗಳಿಂದ ಶೃಂಗರಿಸಲಾಗಿತ್ತು. ವ್ಯವಸ್ಥಾಪಕ ಎಸ್.ಕೆ.ಕಿರಣ್ ಪ್ರಸನ್ನ, ಅರ್ಚಕರಾದ ಸುಬ್ಬಣ್ಣಾಚಾರ್, ಬದ್ರಿ ನಾರಾಯಣಾಚಾರ್, ಶ್ರೀ ಗುರುರಾಜ ಸೇವಾ ಮಂಡಳಿ ಪದಾಧಿಕಾರಿಗಳು, ಭಕ್ತರು ಇದ್ದರು.