ರಘುಮೂರ್ತಿಗೆ ಅತ್ಯುತ್ತಮ ಕೈಗಾರಿಕಾ ನಾವೀನ್ಯತೆಯ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ

CTD RAGMURTY..
Published on

ಚಿತ್ರದುರ್ಗ: ಚಳ್ಳಕೆರೆ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಅವರು ವರ್ಷದ ಅತ್ಯುತ್ತಮ ಕೈಗಾರಿಕಾ ನಾವೀನ್ಯತೆ ಶ್ರೇಷ್ಠ ವ್ಯಕ್ತಿ-2025ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಲ್ಲಿ ಶನಿವಾರ ಜರುಗಿದ ಬೆಂಗಳೂರು ಶಾಖೆ ಟೆರಿಯಲ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಸ್ಕೇಲ್‌ನ ರಜತ ಮಹೋತ್ಸವದ ಸಮಾರಂಭದಲ್ಲಿ ರಘುಮೂರ್ತಿ ಅವರಿಗೆ ಮ್ಯಾನೇಜ್ಮೆಂಟ್ ಸ್ಕೇಲ್‌ನ ರಾಷ್ಟ್ರೀಯ ಅಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಿದರು. ರಘುಮೂರ್ತಿ ಅವರ ಪರವಾಗಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕ್ಯಾಪ್ಟನ್ ರಾಜೇಂದ್ರ ಪ್ರಶಸ್ತಿ ಸ್ವೀಕರಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನನ್ನ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಕೆಲಸಗಳಿಗೆ ಹೆಚ್ಚಿನ ವೇಗ ನೀಡಿ ಮಾಡಿದ ಕೆಲಸಗಳನ್ನು ಗುರುತಿಸಲಾಗಿದೆ. ಕಿರು ಉದ್ಯಮಗಳ ಸ್ಥಾಪನೆ ಪ್ರೋತ್ಸಾಹಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಉದ್ಯಮ ಕ್ಷೇತ್ರಕ್ಕೆ ತರಲು ಪ್ರಯತ್ನ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net