ರಕ್ಷಿತ್ ಶೆಟ್ಟಿ, ಸಾನ್ವಿ ಜತೆ ಸಿನಿಪ್ರಿಯರ ಸೆಲ್ಪಿ

IMG_8510
Published on

ಶಿವಮೊಗ್ಗ: ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರಮೋಷನ್​ಗಾಗಿ ಶಿವಮೊಗ್ಗದ ಭಾರತ್ ಸಿನಿಮಾಸ್​ಗೆ ಆಗಮಿಸಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ನಾಯಕ ಸಾನ್ವಿ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಸಿನಿ ಪ್ರಿಯರು ಫುಲ್ ಥ್ರಿಲ್ ಆದರು.

ಕಿರಿಕ್ ಪಾರ್ಟಿ ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಂಗಳವಾರ ಭಾರತ್ ಸಿನಿಮಾಸ್​ಗೆ ಆಗಮಿಸಿದ್ದ ಚಿತ್ರ ತಂಡ ಪ್ರೇಕ್ಷಕರ ಪ್ರೋತ್ಸಾಹ ಕಂಡು ಖುಷಿಯಾಯಿತು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ ನಟ ರಕ್ಷಿತ್ ಶೆಟ್ಟಿ, ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಪೈರಸಿ ಸಮಸ್ಯೆ ನಮಗೆ ಕಾಡಿಲ್ಲ. ಕಿರಿಕ್ ಪಾರ್ಟಿ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರದ ನಡುವೆ ಸಾಕಷ್ಟು ಭಿನ್ನತೆಯಿದೆ. ಎರಡೂ ಚಿತ್ರಗಳ ನಡುವೆ ಬಜೆಟ್ ಹಾಗೂ ಮೇಕಿಂಗ್ ಅವಧಿಯಲ್ಲಿ ವ್ಯತ್ಯಾಸವಿದೆ ಎಂದರು.

ಬಜೆಟ್ ವಿಷಯದಲ್ಲಿ ಕಿರಿಕ್ ಪಾರ್ಟಿಗಿಂತ ಅವನೇ ಶ್ರೀಮನ್ನಾರಾಯಣ ಸಿನಿಮಾ 4 ಪಟ್ಟು ಹೆಚ್ಚು ಬಜೆಟ್​ನ ಚಿತ್ರ. ಇದು ಬೇರೆ ಭಾಷೆಯಲ್ಲಿ ಡಬ್ಬಿಂಗ್ ಆಗಿದೆ. ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಿಂದಿಯಲ್ಲಿಯೂ ಈ ಸಿನಿಮಾ ಡಬ್ ಆಗಿ ಶೀಘ್ರವೇ ತೆರೆಗೆ ಬರಲಿದೆ ಎಂದು ತಿಳಿಸಿದರು.

ಸಿನಿಮಾದ ಅವಧಿಯನ್ನು 2.45 ತಾಸಿಗೆ ಸೀಮಿತಗೊಳಿಸಲಾಗಿದೆ. 5 ಭಾಷೆಯಲ್ಲಿ ಸಿನಿಮಾ ಆರಂಭಿಸುತ್ತಿರುವುದು ಮೊದಲ ಪ್ರಯೋಗವಾಗಿದೆ. ಹಿಂದಿಯಲ್ಲಿ ಅರ್ಧ ಡಬ್ಬಿಂಗ್ ಮುಗಿದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net