ರಕ್ಷಣೆಗೆ ಇಲಾಖೆಗಳ ಸಹಕಾರ ಅಗತ್ಯ

10 YERRISWAMY 06
Published on

ಬಳ್ಳಾರಿ : ಅವಘಡ ಸಂಭವಿಸಿದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಪ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ಇಲ್ಲಿನ ಹೊರವಲಯದ ಬಳ್ಳಾರಿ - ಹೊಸಪೇಟೆಯ ನೂತನ ಹೆದ್ದಾರಿಯಲ್ಲಿ ಜಿಲ್ಲಾಡಳಿತ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅನಿಲ ಸೋರಿಕೆ ನಿರ್ವಹಣೆಯ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು. ಹೆದ್ದಾರಿಗಳಲ್ಲಿ ಬೃಹತ್ ವಾಹನಗಳಲ್ಲಿ ಎಲ್‌ಪಿಜಿ ಅನಿಲ ತುಂಬಿಕೊಂಡು ಸಂಚರಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದ ಮಾಹಿತಿ ಬಂದ ತಕ್ಷಣವೇ ವಿವಿಧ ಇಲಾಖೆಗಳ ಜವಾಬ್ದಾರಿಯುತವಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಅನಿಲ ಸೋರಿಕೆ ನಿರ್ವಹಣೆ ಕುರಿತು ಅಣುಕು ಪ್ರದರ್ಶನದಿಂದ ಸಂಬಂಧಿಸಿದ ವಿವಿಧ ಇಲಾಖೆಗಳು ಬಲಗೊಂಡಿದ್ದು, ಘಟನೆ ಸಂಭವಿಸಿದ್ದಲ್ಲಿ ರಕ್ಷಣೆ ಕಾರ್ಯ ಕೈಗೊಳ್ಳಲು ಸಕಲ ರೀತಿ ಸಿದ್ಧತೆಗೊಳಿಸಲಾಗಿದೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net