ರಕ್ಷಣಾ ಸಚಿವರಿಗೆ ಮಾಜಿ ಯೋಧರು ಪತ್ರ

bkt-09-11
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಸೈನಿಕರ ವೇದಿಕೆಯಿಂದ ಸಭೆ ನಡೆಸಿ, ಪಾಕ್ ವಿರುದ್ಧ ಯುದ್ಧ ಆರಂಭವಾದರೆ ಯಾವು ಪಾಲ್ಗೊಳ್ಳಲು ಸಿದ್ದ ಎಂದು ರಕ್ಷಣಾ ಸಚಿವರಿಗೆ ಪತ್ರೆ ಬರೆದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರು ಹಾಗೂ ಕಾಂಗ್ರೆಸ್ ಮುಖಂಡರು.
Published on

ಬಾಗಲಕೋಟೆ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಭಯೋತ್ಪಾದನೆ ವಿರುದ್ಧದ ಸಮರ ಸಾರಿರುವ ಭಾರತೀಯ ಸೇನೆಯನ್ನು ಬೆಂಬಲಿಸಿ ಹಾಗೂ ಪಾಕ್ ವಿರುದ್ಧ ಯುದ್ಧ ಆರಂಭವಾದರೆ ನಾವೆಲ್ಲ ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ದರಿದ್ದೇವೆ ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಯೋಧರ ವೇದಿಕೆ ಸದಸ್ಯರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದರು.

ನವನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ವೀರಯೋಧರಿಗೆ ನಮನ ಸಲ್ಲಿಸಲು ಯೋಧರಿಗೆ ಸಲಾಂ ಕಾರ್ಯಕ್ರಮ ಹಾಗೂ ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ಪ್ರಜೆಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ರಕ್ಷಣಾ ಸಚಿವರಿಗೆ ಈ ಪತ್ರವನ್ನು ಬರೆದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಮಾಜಿ ಯೋಧರ ಸಂಘದ ಅಧ್ಯಕ್ಷ ಪ್ರಭುಲಿಂಗಯ್ಯ ಕಾಳಹಸ್ತಿ ಮಾತನಾಡಿ, ಇಡೀ ಜಗತ್ತಿಗೆ ಕಂಟಕವಾಗಿರುವ ಭಯೋತ್ಪಾದನೆ ನಿರ್ಮೂಲನೆ ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಗ್ರರನ್ನು ಪೋಷಿಸಿಕೊಂಡು ಬಂದಿರುವ ಪಾಕಿಸ್ತಾನದ ವಿರುದ್ಧ ನಮ್ಮ ಭಾರತವೂ ಯುದ್ಧ ಆರಂಭಿಸಿ, ಮಾಜಿ ಸೈನಿಕರನ್ನು ಸಂಪರ್ಕಿಸಿದರೆ ನಾವೆಲ್ಲರೂ ಯುದ್ಧಕ್ಕೆ ತೆರಳಲು ಸಿದ್ದರಿದ್ದೇವೆ. ಆ ಮೂಲಕ ಭಾರತ ಮಾತೆಯ ಸೇವೆ, ಮಾತೃಭೂಮಿಯ ರಕ್ಷಣೆಗಾಗಿ ನಾವೆಲ್ಲ ಸಜ್ಜಾಗಿದ್ದೇವೆ. ತಮ್ಮಿಂದ ಯಾವುದೇ ಸಮಯದಲ್ಲಿ ಕರೆ ಬಂದರೂ ನಾವು ಯುದ್ಧದಲ್ಲಿ ಪಾಲ್ಗೊಳ್ಳಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಪಾಕ್‌ನ ೯ ಉಗ್ರರ ನೆಲೆಗಳನ್ನು ನಮ್ಮ ಸೈನಿಕರು ದ್ವಂಸ ಮಾಡುವ ಮೂಲಕ ಭಯೋತ್ಪಾದಕರಿಗೆ ದೊಡ್ಡ ಮಟ್ಟದ ಹೊಡೆತವನ್ನು ಕೊಟ್ಟಿದ್ದಾರೆ. ಹೀಗಾಗಿ ನಮ್ಮ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ಮಾಜಿ ಯೋಧರ ಸಭೆ ನಡೆಸಲಾಯಿತು. ಜೊತೆಗೆ ಭಾರತೀಯ ಸೇನೆಗೆ ನೈತಿಕವಾಗಿ ಬೆಂಬಲವನ್ನು ಕೊಡುವ ತೀರ್ಮಾನ ಮಾಡಲಾಯಿತು. ಹಾಗೆಯೇ ಕಾಂಗ್ರೆಸ್ ಪಕ್ಷದ ಮಾಜಿ ಯೋಧರ ವೇದಿಕೆಯ ಸದಸ್ಯರು ಪಾಕ್ ವಿರುದ್ಧ ಯುದ್ಧ ಆರಂಭವಾದರೆ ರಕ್ಷಣ ಇಲಾಖೆಯವರು ಮಾಜಿ ಯೋಧರು ಯುದ್ಧದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರೆ ನಾವು ಸಿದ್ದರಿದ್ದೇವೆ ಎಂದು ರಕ್ಷಣಾ ಸಚಿವರಿಗೆ ಪತ್ರವನ್ನು ಕಳುಹಿಸಲು ತೀರ್ಮಾನಿಸಿದರು ಎಂದು ತಿಳಿಸಿದರು.

ಇದೇ ಮಾಜಿ ಸೈನಿಕರು ಭಾರತ ಮಾತಾ ಕೀ ಜೈ, ವಂದೆ ಮಾತರಂ, ಹಮ್ ಸಬ್ ಏಕ್ ಹೈ, ಜೈ ಜವಾನ್ ಜೈ ಕಿಸಾನ್ ಎನ್ನುವ ದೇಶಭಕ್ತಿಯ ಘೋಷಣೆ ಹಾಕಿದರು. ದೇಶದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರಿಗೆ ನೈತಿಕಸ್ಥೆÊರ್ಯ ತುಂಬುವ ಸಲುವಾಗಿ ಇಂದು `ಯೋಧರಿಗೆ ಸಲಾಂ' ಹೆಸರಿನಲ್ಲಿ ರಾಷ್ಟçದ ಏಕತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಈ ಸಭೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ , ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಬ್ಲಾಕ್ ಅಧ್ಯಕ್ಷ ಎಸ್.ಎನ್.ರಾಂಪೂರ, ಸೇವಾದಳದ ವಿಲಾಸ ಮೆಣಸಗಿ, ಮಾಜಿ ಸೈನಿಕರ ವಿಭಾಗದ ರಾಜಕುಮಾರ ಲಮಾಣಿ, ಷಣ್ಮುಕ ಮಡಿವಾಳರ, ರಾಮಣ್ಣ ಚಿತ್ತರಗಿ, ಸಿದ್ದಲಿಂಗಯ್ಯ ವಸ್ತçದ, ಮಲ್ಲಿಕಾರ್ಜುನ ಕಗಲಗೋಂಬ, ಶಂಕರಗೌಡ ಹಗೆದಾಳ, ಮಲ್ಲಿಕಾರ್ಜುನ ಉಮಚಗಿ, ರಾಯಪ್ಪ ಹಾದಿಮನಿ, ಹಾಗೂ ಪಕ್ಷದ ಮಹಿಳಾ ಕಾರ್ಯಕರ್ತರಾದ ರೇಣುಕಾ ನ್ಯಾಮಗೌಡ, ಸುಧಾ ಪಾಟೀಲ, ಮಂಜುಳಾ ಭುಸಾg,ೆ ಮುಮತಾಜ ಸುತಾರ, ರೇಣುಕಾ ನಾರಾಯಣಕರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net