ರಕ್ತದಾನಿಗಳು ದೇವರ ಸಮಾನ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್

28HSN2
Published on

ಹಾಸನ: ರಕ್ತದಾನದ ಮೂಲಕ ಜೀವ ಉಳಿಸುವ ಕೆಲಸ ಮಾಡುವವರು ದೇವರಿಗೆ ಸಮಾನರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಹೇಳಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಟ್ಯಾಕ್ಸಿ ನಿಲ್ದಾಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮಜ್ದೂರ್ ಆಟೋ ಚಾಲಕರ ಸಂಘ ಹಾಗೂ ವಿವಿಧ ಇಲಾಖೆ, ಸಂಘಟನೆಗಳ ವತಿಯಿಂದ ಅಂತಾರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತುರ್ತು ಸಂದರ್ಭದಲ್ಲಿ ರೋಗಿಯ ಜೀವ ಉಳಿಸಲು ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಆದ್ದರಿಂದ ದಾನಿಗಳ ಸಂಖ್ಯೆ ಹೆಚ್ಚಿದಷ್ಟು ರೋಗಿಗಳು ಪರದಾಡುವುದು ತಪ್ಪುತ್ತದೆ. ಹೀಗಾಗಿ ಸಾರ್ವಜನಿಕರೂ ರಕ್ತದಾನವನ್ನು ದೇವರ ಕೆಲಸವೆಂದು ತಿಳಿದು ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಸಮಾಜಸೇವಕ ಅಮ್ಜದ್ ಖಾನ್, ಕ್ಷಯಾರೋಗ ನಿಯಂತ್ರಣಾಧಿಕಾರಿ ನಾಗೇಶ್ ಪಿ. ಆರಾಧ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಛೇರ‌್ಮನ್ ಎಚ್.ಪಿ. ಮೋಹನ್, ಲೇಖಕಿ ಕೆ.ಟಿ. ಜಯಶ್ರೀ, ಮಹಾವೀರ್ ಬನ್ಸಾಲಿ, ಮಜ್ದೂರ್ ಆಟೋ ಚಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ದಿಲೀಪ್, ಹಿಮ್ಸ್ ರಕ್ತನಿಧಿ ವಿಭಾಗದ ಸಿಬ್ಬಂದಿ ನಾಗಲಕ್ಷ್ಮಿ, ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net