

ಅರಸೀಕೆರೆ: ರಕ್ತದಾನಿಗಳ ಸೇವೆ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್ ಹೇಳಿದರು.
ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಭಾನುವಾರ ಸಂಜೆ ಸಮಾಜಮುಖಿ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ರಕ್ತದಾನಿಗಳನ್ನು ಗೌರವಿಸಿ ಮತನಾಡಿದರು.
ತುರ್ತು ಸಂದರ್ಭದಲ್ಲಿ ರಕ್ತ ಕೊರತೆ ಎದುರಿಸುತ್ತಿರುವ ಸಹಸ್ರಾರು ರೋಗಿಗಳಿಗೆ ಕಳೆದ ಹತ್ತಾರು ವರ್ಷದಿಂದ ನೆರವಾಗುತ್ತಿರುವುದು ಶ್ಲಾಘನೀಯ. ಇಂತಹ ಜನಪರ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ಎಂದು ಆಶಿಸಿದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಸೇರಿ ಹಲವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನ ಕುಮಾರ್,ಸದಸ್ಯ ಯದಾಪುರ ತೇಜಸ್, ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್,ಉಂಡಿಗನಾಳು ದಿನೇಶ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್,ಅರುಣ್ ಕುಮಾರ್, ಚೇತನ್ ಜೈನ್, ಸುಧಾ ಕಲ್ಯಾಣ್ ಇತರರಿದ್ದರು.