ರಕ್ತದಾನದಿಂದ ಜ್ಞಾಪಕ ಶಕ್ತಿ ವೃದ್ಧಿ

hospital hnp
Published on

ಹೊಳೆನರಸೀಪುರ : ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ.ನಟರಾಜ್ ಹೇಳಿದರು.

ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ರಕ್ತ ನಿಧಿ ಕೇಂದ್ರ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದೊಂದಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ಎಷ್ಟೋ ಜೀವಗಳನ್ನು ಉಳಿಸಿದಂತಾಗುತ್ತದೆ .18 ವರ್ಷ ಮೇಲ್ಪಟ್ಟ 60 ವರ್ಷದವರೆಗೆ ರಕ್ತದಾನ ಮಾಡಬಹುದು. ಕೆಲವರು ಆರೋಗ್ಯದ ಹಿತದೃಷ್ಟಿಯಿಂದ ಹತ್ತರಿಂದ ಹನ್ನೆರಡು ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿದ್ದಾರೆ. ಇಂತಹ ಮಹಾದಾನಿಗಳಿಂದ ಅಪಘಾತಕ್ಕೆ ಒಳಗಾದವರಿಗೆ, ಹೆರಿಗೆ ಸಮಯದಲ್ಲಿ ರಕ್ತ ಸ್ರಾವ ಆಗುವ ಮಹಿಳೆಯರಿಗೆ ತುಂಬ ಉಪಯುಕ್ತವಾಗಿದೆ. ರಕ್ತದಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ರಕ್ತದ ಒತ್ತಡ ಇತರ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 12 ಬಾರಿ ರಕ್ತದಾನ ಮಾಡಿದ ಗಂಗಾಧರ್ ಹಾಗೂ ಕೇಶವಪ್ರಸಾದ್ ಅವರನ್ನು ಗೌರವಿಸಲಾಯಿತು. ಆಸ್ಪತ್ರೆಯಲ್ಲಿ 60 ಜನ ರಕ್ತದಾನ ಮಾಡಿದರು. ಹಾಸನ ಜಿಲ್ಲಾ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ. ನಾಗಲಕ್ಷ್ಮೀ, ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿಯ ಡಾ.ಕೆ.ಎಸ್.ರೇಖಾ, ಆಪ್ತ ಸಮಾಲೋಚಕಿ ಬಾನುಶ್ರೀ, ಸಿಬ್ಬಂದಿ ಎಂ. ಪ್ರಕಾಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net