ರಕ್ತದಾನಕ್ಕೆ ಯುವಜನತೆ ಮುಂದಾಗಬೇಕು

20-08-Shiva-3
ರಾಯಚೂರಿನ ಐಎಂಎ ಸಭಾಂಗಣದಲ್ಲಿ ಭಾನುವಾರ ಮಾತೃಭೂಮಿ ಪ್ರತಿಷ್ಠಾನದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ವೈದ್ಯರಾದ ಡಾ.ರವಿರಾಜೇಶ್ವರ, ಡಾ.ನಾಗರಾಜ ಬಾಲ್ಕಿ, ಡಾ.ರಾಮನಗೌಡ, ಡಾ.ಮಲ್ಲಿಕಾ, ಪ್ರತಿಷ್ಠಾನದ ಅಧ್ಯಕ್ಷ ಎಂ.ರಾಜೇಂದ್ರಕುಮಾರ, ಕಾರ್ಯದರ್ಶಿ ಶ್ರೀಕಾಂತ ಕಳಸ ಇದ್ದರು.
Published on

ರಾಯಚೂರು: ರಕ್ತ ಭಂಡಾರಗಳಲ್ಲಿ ರಕ್ತದ ಶೇಖರಣೆ ಕಡಿಮೆಯಾಗುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಅಗತ್ಯ ರಕ್ತ ದೊರೆಯದಂತಾಗಿದ್ದು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ರಕ್ತ ಶೇಖರಣೆಗೆ ಮುಂದಾಗಬೇಕು ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಮಾತೃಭೂಮಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದೆ ಬರಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಇಲ್ಲ ಎನ್ನುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಮಾರು 77ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರವಿರಾಜೇಶ್ವರ, ಡಾ.ನಾಗರಾಜ ಬಾಲ್ಕಿ, ಡಾ.ರಾಮನಗೌಡ, ಡಾ.ಮಲ್ಲಿಕಾ, ಪ್ರತಿಷ್ಠಾನದ ಅಧ್ಯಕ್ಷ ಎಂ.ರಾಜೇಂದ್ರಕುಮಾರ, ಕಾರ್ಯದರ್ಶಿ ಶ್ರೀಕಾಂತ ಕಳಸ, ಪದಾಕಾರಿಗಳಾದ ಶರಣಬಸವ ದೋತರಬಂಡಿ, ಬಸವರಾಜಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net