

ಸೊರಬ: ಯುವ ಸಮುದಾಯ ರಕ್ತದಾನದಂತಹ ಸತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಉಳವಿ ಆಸ್ಪತ್ರೆ ಆಡಳಿತ ವೈದ್ಯಾಕಾರಿ ಡಾ. ಆರ್.ಪೃಥ್ವಿ ಹೇಳಿದರು.
ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಆರ‌್ಯೋಗ್ಯಾಕಾರಿ ಕಚೇರಿ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ರಕ್ತನಿ ಘಟಕ ಶಿವಮೊಗ್ಗ, ತಾಲೂಕು ಆರೋಗ್ಯಾಕಾರಿ ಕಚೇರಿ, ದೂಗೂರು, ಉಳವಿ, ನಿಸರಾಣಿ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಧರ್ಮಸ್ಥಳ ಸ್ವಸಹಾಯ ಸಂಘ, ಹಾಗೂ ಸ್ತ್ರೀಶಕ್ತಿ ಸಂಘಗಳ ಮತ್ತು ಉಳವಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ರಕ್ತದ ಕೊರತೆ ನೀಗಿಸಲು ರಕ್ತದಾನವೇ ಮಾರ್ಗ. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ದಿನವೂ ಸುಮಾರು 80ರಿಂದ 100 ಯೂನಿಟ್ ರಕ್ತದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ರಕ್ತದಾನದಂತಹ ಪುಣ್ಯದ ಕಾರ್ಯದಲ್ಲಿ ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಯೂ ಪಾಲ್ಗೊಳ್ಳಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.
ಶಿಬಿರದಲ್ಲಿ 38ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು. ಆರೋಗ್ಯ ನೀರಿಕ್ಷಕ ಶಶಿಧರ್, ಎಲ್.ಚಂದ್ರನಾಯ್ಕ, ನಾಗರಾಜ್, ಜಯಲಕ್ಷ್ಮೀ, ಗುರುಕಿರಣ, ನಿರ್ಮಲಾ, ಉಳವಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್‌ಕುಮಾರ್, ಎಚ್.ಎಸ್.ಮಹಾಬಲೇಶ್ವರ ಇತರರಿದ್ದರು.