

ಯಾದಗಿರಿ: ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನಕ್ಕೆ ಮುಂದಾಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರ್ಡಿಯಾ ಹೇಳಿದರು.
ನಗರದಲ್ಲಿ ವೈದ್ಯಕೀಯ ವಿe್ಞÁನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ರಕ್ತದಾನಿಗಳ ದಿನಾಚರಣೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿ¯್ಲೆಯಲ್ಲಿ ರಕ್ತ ಕೇಂದ್ರ ಆರಂಭವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಲ್ಲಿ ವೈದ್ಯ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಜಿ¯್ಲÁ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ ಮಾತನಾಡಿ, ೧೭ರಿಂದ ೬೫ ವರ್ಷದೊಳಗಿರುವ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ೨ ಬಾರಿ ರಕ್ತದಾನ ಮಾಡಬಹುದು. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದರೆ ಅವರ ದೇಹದಲ್ಲಿ ಹೊಸ ರಕ್ತ ಉಂಟಾಗಲು ಪ್ರಚೋದನೆಯಾಗುತ್ತದೆ ಯಾವುದೇ ತರಹದ ಆಪತ್ತು ಬರುವುದಿಲ್ಲ ಬದಲಾಗಿ ಹೊಸ ಚೈತನ್ಯ ಮೂಡುತ್ತದೆ ಎಂದು ಹೇಳಿದರು.
ಯಿಮ್ಸï ವೈದ್ಯಕೀಯ ನಿರ್ದೇಶಕ ಡಾ.ಸಂದೀಪ್ ಮಾತನಾಡಿ, ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿ ರಕ್ತದಾನ ಮಾಡಲು ಮುಂದೆ ಬಂದು ಸಮಾಜದಲ್ಲಿ ಪ್ರೇರಣೆಯಾಗಬೇಕು. ಅಲ್ಲದೆ ರಕ್ತ ಕೇಂದ್ರಕ್ಕೆ ತುಂಬಾ ಜನರಿಗೆ ರಕ್ತದ ಅಗತ್ಯವಿದೆ ಎಂದರು.
ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಪಾಟೀಲï, ಯಿಮ್ಸï ರಕ್ತ ಕೇಂದ್ರ ವೈದ್ಯಕೀಯ ಅಧಿಕಾರಿ ಡಾ.ಸಿದ್ದಲಿಂಗರೆಡ್ಡಿ ಮಾತನಾಡಿದರು. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ನಿಂಗಪ್ಪ ಜಡಿ, ಅಭಿಲಾಷ ಮತ್ತು ಸುಪ್ರೀತ ಅವರನ್ನು ಸನ್ಮಾನಿಸಲಾಯಿತು.
ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ ೩೪ ಜನ ರಕ್ತದಾನ ಮಾಡಿದರು. ಯಿಮ್ಸï ಪ್ರಾಚಾರ್ಯ ಡಾ.ನವಾಜ್ ಉಮರ್, ಹಣಕಾಸು ಸಲಹೆಗಾರ ಕಾಶೀನಾಥ, ಜಿ¯್ಲÁ ಶಸ್ತç ಚಿಕಿತ್ಸಕಿ ಡಾ.ರಿಜ್ವಾನಾ ಆಫ್ರೀನ್, ಡಾ.ಮಾನಸಾ ದಾಸ, ಡಾ.ಶಿವಕುಮಾರ, ಡಾ.ಮಲ್ಲಪ್ಪ, ಡಾ.ಪದ್ಮಾನಂದ ಗಾಯಕವಾಡ, ಡಾ.ಹಣಮಂತರೆಡ್ಡಿ, ಯಿಮ್ಸï ಬೋಧಕ ಸಿಬ್ಬಂದಿ ಸೇರಿ ಇತರರಿದ್ದರು.