

ಚಿತ್ರದುರ್ಗ: ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತೀಯ ತೇರಾಪಂತ್ ಯುವ ಪರಿಷತ್ ಆಶ್ರಯದಲ್ಲಿ ಶನಿವಾರ ನಗರದ ಎಸ್‌ಆರ್‌ಎಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಮಾತನಾಡಿ, ಶ್ರೇಷ್ಠ ದಾನಗಳಲ್ಲಿ ರಕ್ತದಾನವೂ ಒಂದಾಗಿದೆ ಎಂದರು. ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಚಾರ‌್ಯೆ ಎಂ.ಜೆ.ಸಾಧನಾ, ಎಬಿಇಡಿ ಉಪ ಪ್ರಾಚಾರ್ಯ ಹನುಮಂತಪ್ಪ, ಪರಿಷತ್ ನೇಮಿಚಂದ್ ಬಾಫ್ನಾ, ಭರತ್ ಜಿರವಾಲಾ, ಮುಕೇಶ್ ಬಾಫ್ನಾ ಇದ್ದರು.