ರಕ್ತದಾನ ಶಿಬಿರ ನಾಳೆ

Blood donete
Published on

ಗೋಣಿಕೊಪ್ಪ: ಜೆಸಿಐ ಸಪ್ತಾಹ-2023 ಪ್ರಯುಕ್ತ ಗೋಣಿಕೊಪ್ಪದಲ್ಲಿ ಸೆ.9 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಗೋಣಿಕೊಪ್ಪಲಿನ ಶ್ರೀ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಹ್ನ 1 ಗಂಟೆಯವರೆಗೆ ನಡೆಯಲಿರುವ ಶಿಬಿರದ ಅಧ್ಯಕ್ಷತೆಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ನೀತ್ ಅಯ್ಯಪ್ಪ ವಹಿಸಲಿದ್ದಾರೆ. ಕೊಡಗಿನಲ್ಲಿ ರಕ್ತದ ಕೊರತೆ ಇದ್ದು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುವಂತೆ ಘಟಕದ ಪೂರ್ವಧ್ಯಕ್ಷ ಟಾಟು ಮೊಣ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net