ರಕ್ತದಾನ ಮಾಡಿ ಜೀವ ಉಳಿಸಿ :ಡಾ. ಬಿ.ಎಸ್. ಬಸವರಾಜು

ರಕ್ತದಾನ ಮಾಡಿ ಜೀವ ಉಳಿಸಿ :ಡಾ. ಬಿ.ಎಸ್. ಬಸವರಾಜು
Published on

ಹಾಸನ: ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆ, ಕಾಮಾಲೆ ರೋಗ, ಪ್ರತಿರೋಧಕ ಚುಚ್ಚುಮದ್ದು ಪಡೆದ ವ್ಯಕ್ತಿಯನ್ನು ಹೊರತುಪಡಿಸಿ 18 ವರ್ಷ ದಿಂದ 60 ವರ್ಷ ವಯೋಮಾನದ ಪ್ರತಿಯೋಬ್ಬರು ರಕ್ತದಾನ ಮಾಡಬಹುದಾಗಿರುವುದರಿಂದ ನಿರ್ಭೀತರಾಗಿ ರಕ್ತದಾನ ಮಾಡಿ ಎಂದು ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಪ್ರಭಾರ,ಡೀನ್(ಕೃಷಿ.) ಡಾ. ಬಿ.ಎಸ್. ಬಸವರಾಜು ಕರೆ ನೀಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಹಾಸನ ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ ಮತ್ತು ಎನ್.ಎಸ್.ಎಸ್. ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕೃಷಿ ಮಹಾವಿದ್ಯಾಲಯದ ಹಾಸನಾಂಭ ಸಭಾಂಗಣದಲ್ಲಿ ಏಪರ್ಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಕ್ತ ದಾನ ಮಾಡುವ ಮೂಲಕ ಜೀವಗಳನ್ನು ಉಳಿಸಲು ಸಹಕರಿಸಿ ಎಂದರು.
ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಬಿ. ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಒಂದು ಸರ್ಕಾರಿ ಹಾಗೂ ನಾಲ್ಕು ಖಾಸಗಿ ರಕ್ತ ನಿಧಿಗಳಿದ್ದು, ನಮ್ಮ ಜಿಲ್ಲೆಯ ಜನಸಂಖ್ಯೆ 18 ಲಕ್ಷ ಇದ್ದು, ಸರಾಸರಿ ದಿನಕ್ಕೆ 1800 ರಕ್ತದ ಯೂನಿಟ್‌ಗಳ ಅವಶ್ಯಕತೆ ಒಂದು ತಿಂಗಳಿಗೆ ಇರುತ್ತದೆ. ಅದರೆ ಅದರಲ್ಲಿ ಅರ್ಧದಷ್ಟು ಮಾತ್ರ ಪೂರೈಕೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಯುವ ಜನತೆ ರಕ್ತದಾನ ಮಾಡಲು ಮುಂದಾಗುವಂತೆ ತಿಳಿಸಿದರು.
ಕಾರ್ಯಕ್ರಮದ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ರವಿಕುಮಾರ್ ಎಂ. ಬಲ್ಲೇನಹಳ್ಳಿ, ಅವರ ಮಾತನಾಡಿ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಜೊತೆಗೆ ಒಬ್ಬ ಆರೋಗ್ಯವಂತ ಮಹಿಳೆ ವರ್ಷದಲ್ಲಿ ಮೂರು ಬಾರಿ ಮತ್ತು ಒಬ್ಬ ಪುರುಷ ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಮನಸ್ಸು ಮಾಡಬೇಕಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಸ್. ಟಿ. ಭೈರಪ್ಪನವರ್, ಡಾ. ಅರವಿಂದ್ ಕುಮಾರ್, ಎಂ.ಕೆ. ಶಿವಬಸಪ್ಪ ಕಂದಕೂರ, ಡಾ, ಎ. ನಟರಾಜ, ಡಾ, ವಿಶ್ವನಾಥ ಅಂಗಡಿ, ಡಾ. ಶಶಿಧರ್ ಕೆಂಕೆರೆ, ಮತ್ತಿತರರು ಭಾಗವಹಿಸಿದ್ದರು.
ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಪ್ರದೀಪ್ ಕುಮಾರ್, ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಿಯಾಂಕ ಎಚ್. ಯು, ಸನ್ಮಾನ ಮಾಡಲಾಯಿತು.
ಈ ಶಿಬಿರದಲ್ಲಿ ಒಟ್ಟು 76 ರಕ್ತದ ಯೂನಿಟ್‌ಗಳ ಸಂಗ್ರಹ ಆಗಿದ್ದು, ಹಾಸನದ ಜೀವ ಸಂಜೀವಿನಿ ಬ್ಲಡ್ ಬ್ಯಾಂಕ್ ಇವರ ಸಹಕಾರದೊಂದಿಗೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net