ರಕ್ತದಾನ ಜೀವದಾನಕ್ಕೆ ಸಮ

11..4
ಹುಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಪ್ರಿಯಾ ಪಾಟೀಲ, ಎಸ್.ಆರ್. ಶೆಟ್ಟಿ, ಎಂ.ಎಸ್. ಕಮತಗಿ ಇತರರಿದ್ದರು.
Published on

ಹುಕ್ಕೇರಿ: ಆರೋಗ್ಯವಂತ ಯುವಕರು ರಕ್ತದಾನ ಮಾಡುವುದರಿಂದ ತುರ್ತುಚಿಕಿತ್ಸೆ ಪಡೆಯುವ ರೋಗಿಗಳಿಗೆ ಜೀವದಾನ ಮಾಡಿದಂತಾಗುತ್ತದೆ ಎಂದು ಜಿಲ್ಲಾ ಬಿಎಂಎಸ್ ವೈದ್ಯಾಕಾರಿ ಡಾ.ಪ್ರಿಯಾ ಪಾಟೀಲ ಹೇಳಿದರು.

ಪಟ್ಟಣದ ಸಿಎಸ್ ತುಬಚಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ರೆಡ್‌ಕ್ರಾಸ್ ಘಟಕ, ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ವಾರ್ಷಿಕ ಮೂರು ಬಾರಿ ರಕ್ತ ನೀಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುವುದರಿಂದ ಹೃದ್ರೋಗ ಬರುವ ಸಾಧ್ಯತೆ ಕಡಿಮೆ. ಒಬ್ಬರ ಆರೋಗ್ಯ ಕಾಪಾಡಿದ ಸಾರ್ಥಕ ಭಾವನೆ ರಕ್ತದಾನಿಯಲ್ಲಿ ಮೂಡುತ್ತದೆ ಎಂದರು.

ಸಿಎಸ್ ತುಬಚಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಆರ್. ಶೆಟ್ಟಿ ಮಾತನಾಡಿ, ರಕ್ತದಾನ ಶೇಷ್ಠ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜ ಸೃಷ್ಟಿಸಬೇಕು ಎಂದರು.

ಆಸ್ಪತ್ರೆ ಮುಖ್ಯ ವೈದ್ಯಾಕಾರಿ ಡಾ.ನರಸನ್ನವರ ಮಾತನಾಡಿದರು. ತಾಲೂಕು ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಸೋಮಶೇಖರ ಎಚ್., ಕಾರ್ಯದರ್ಶಿ ಸಿ.ಆರ್. ಶೆಟ್ಟಿ, ನಿರ್ದೇಶಕ ಎಸ್.ಬಿ.ಬುರ್ಜಿ, ಪ್ರಾಚಾರ್ಯ ಎಂ.ಎಸ್. ಕಮತಗಿ, ಬಿ.ಎಸ್. ಪಾಟೀಲ, ಪ್ರಾಧ್ಯಾಪಕಿ ಎಸ್.ಆರ್. ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net