ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ

14
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ವೈದ್ಯಕೀಯ ಸಂಘ (ಐಎಂಎ), ಶ್ರೀಯಾ ಕಾಲೇಜ್ ಆ್ ನರ್ಸಿಂಗ್ ಮತ್ತು ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಗರದ ಶ್ರೀಯಾ ಆಸ್ಪತ್ರೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಪರಮಾತ್ಮಾ ಮಾಹಾಸಂಸ್ಥಾನದ ಶ್ರೀ ಪರಮಾತ್ಮಾ ಸ್ವಾಮೀಜಿ ಮಾತನಾಡಿ, ರಕ್ತದಾನ ಮಹಾದಾನ. ಇದು ಜೀವ ಉಳಿಸುವ ಶ್ರೇಷ್ಠ ಕಾರ್ಯ. ವೈದ್ಯರು ದೇವರಿಗೆ ಸಮಾನ ಎಂಬ ನಂಬಿಕೆಯನ್ನು ವೈದ್ಯ ಸಮೂಹ ಸಾಮಾಜಿಕ ಕಳಕಳಿಯೊಂದಿಗೆ ಸಾಕಾರಗೊಳಿಸಬೇಕು ಎಂದರು.
ರೋಟರಿ ಬ್ಲಡ್ ಬ್ಯಾಂಕ್ ವೈದಾಧಿಕಾರಿ ಡಾ. ನಂದೀಶ ರಕ್ತದಾನದ ಮಹತ್ವ ತಿಳಿಸಿದರು.
ಶ್ರೀಯಾ ನರ್ಸಿಂಗ್ ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಡಾ. ಸತೀಶ ಇರಕಲ್, ಸಂಜಯ ಇರಕಲ್, ಡಾ. ಜ್ಯೋತಿಪ್ರಕಾಶ ಸುಲ್ತಾನಪುರಿ, ಡಾ. ಪಲ್ಲವಿ ದೇಶಪಾಂಡೆ, ಡಾ. ಸುಷ್ಮಾ  ರಾಮನಗೌಡರ, ಸಂಧ್ಯಾ ಜಗದಾಳೆ, ಪ್ರಾಚಾರ್ಯ ರೋಡಾ ಜೇಸುರಾಜ್, ಇತರರಿದ್ದರು.
ಡಾ. ವಾಣಿ ಇರಕಲ್ ಸ್ವಾಗತಿಸಿದರು. ಪುಂಡಲೀಕ ಜಗದಾಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net