ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠ

6-66
ತೆಲಸಂಗ ಗ್ರಾಮದಲ್ಲಿ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಜನ್ಮದಿನದ ನಿಮಿತ್ತ ರಕ್ತದಾನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಜರುಗಿತು. ಬಸವ ಗುಂಡಯ್ಯ ಸ್ವಾಮೀಜಿ, ಶಂಕರಶೆಟ್ಟಿ ಕುಂಬಾರ, ರಾಜಶೇಖರ ಕುಂಬಾರ, ಪ್ರಭು ಕುಂಬಾರ, ಸುರೇಶ ಕುಂಬಾರ ಇದ್ದರು.
Published on

ತೆಲಸಂಗ, ಬೆಳಗಾವಿ: ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠವಾಗಿದೆ ಎಂದು ಕುಂಬಾರ ಗುರುಪೀಠದ ಬಸವ ಗುಂಡಯ್ಯ ಸ್ವಾಮೀಜಿ ಹೇಳಿದರು.
ಗ್ರಾಮದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠದಲ್ಲಿ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಜನ್ಮದಿನದ ನಿಮಿತ್ತ ಶನಿವಾರ ಆಯೋಜಿಸಿದ್ದ ರಕ್ತದಾನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಆಗಾಗ ರಕ್ತದಾನ ಮಾಡಬೇಕು ಎಂದರು. ನಾವು ಇತರರಿಗಾಗಿ ಜೀವನ ನಡೆಸುವುದು ತುಂಬ ಕಷ್ಟವಾದರೂ, ಬದುಕು ಅರ್ಥಪೂರ್ಣವಾಗುವುದಕ್ಕೆ ಸಹಕಾರಿ ಎಂದರು. ರಾಜ್ಯ ಕುಂಬಾರ ಯುವ ಸೈನ್ಯದ ಅಧ್ಯಕ್ಷ ಶಂಕರಶೆಟ್ಟಿ ಕುಂಬಾರ, ರಾಜಶೇಖರ ಕುಂಬಾರ, ಪ್ರಭು ಕುಂಬಾರ, ಸುರೇಶ ಕುಂಬಾರ, ಶಿವಬಸಪ್ಪ ಕುಂಬಾರ, ಸದಾನಂದ ಕುಂಬಾರ, ನಿಂಗಪ್ಪ ಕುಂಬಾರ, ಅಪ್ಪಸಾಬ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net