

ಸೋಮವಾರಪೇಟೆ: ಅಬಕಾರಿ ಇಲಾಖೆ, ತಥಾಸ್ತು ಸಾತ್ವಿಕ ಸಂಸ್ಥೆ, ಮಡಿಕೇರಿ ರಕ್ತನಿಧಿ ಘಟಕ, ಜಿಲ್ಲಾ ಎಚ್.ಐ.ವಿ. ನಿಯಂತ್ರಣ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ, ಅಂಗಾಂಗ ದಾನ ಹಾಗು ಏಡ್ಸ್ ಕುರಿತ ಮಾಹಿತಿ ಅರಿವು ಕಾರ್ಯಾಗಾರ ಸೋಮವಾರ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ನೇತ್ರ ತಜ್ಞರಾದ ಎನ್.ಜೆ. ವಿಕ್ರಂ ಉದ್ಘಾಟಿಸಿದರು. ನಂತರ ಮಾತನಾಡಿ, ಮನುಷ್ಯನ ದೇಹದಲ್ಲಿ ಕಣ್ಣು ಪ್ರಮುಖ ಪಾತ್ರ ವಹಿಸುತ್ತಿದ್ದು, ದೃಷ್ಟಿಯಿಲ್ಲದವರ ಬದುಕು ಕತ್ತಲಿನಲ್ಲಿ ರುತ್ತದೆ. ಸತ್ತ ನಂತರ ನಮ್ಮ ಕಣ್ಣು ಜೀವಂತ ಇರುವಾಗಲೇ ದಾನ ಮಾಡಿ ದಲ್ಲಿ ಅದು ಇಬ್ಬರ ಬಾಳಿಗೆ ಬೆಳಕಾಗುತ್ತದೆ. ಸತ್ತ ನಂತರ ಮಣ್ಣಾಗುವ ನೇತ್ರಗಳನ್ನು ದಾನ ಮಾಡಬೇಕೆಂದು ಮನವಿ ಮಾಡಿದರು.
ರಕ್ತನಿಧಿ ಕೇಂದ್ರದ ಮೇಲ್ವಿಚಾರಕ ರಾದ ಕರುಂಬಯ್ಯ ಮಾತನಾಡಿ, ರಕ್ತದ ಕೊರತೆಯನ್ನು ಮನುಷ್ಯನ ರಕ್ತದಿಂದಲೇ ತುಂಬಿಸಲು ಸಾಧ್ಯ. ಸಂಘ, ಸಂಸ್ಥೆಗಳು ಮೂರು ತಿಂಗಳಿಗೊಮ್ಮೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿರುವ ರಕ್ತದ ಕೊರತೆಯನ್ನು ನೀಗಬೇಕೆಂದರು.
ಅಬಕಾರಿ ನಿರೀಕ್ಷಕ ಲೋಕೇಶ್ ಸುವರ್ಣ, ಆಲೂರು ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣ, ಎಚ್‌ಐವಿ ನಿಯಂತ್ರಣ ವಿಭಾಗದ ಮೇಲ್ವಿಚಾರಕಿ ಸುನೀತಾ, ನೇತ್ರ ತಜ್ಞರಾದ ಕಾವ್ಯ, ಕಿರಣ್, ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಇದ್ದರು.