ರಕ್ತಚಂದನ ಸಾಗಿಸುತ್ತಿದ್ದ ಇಬ್ಬರ ಬಂಧನ

Published on

ಕೊಳ್ಳೇಗಾಲ: ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಟಗರಪುರ ಸಮೀಪ ಮಾಲು ಸಮೇತ ಅರಣ್ಯ ಸಂಚಾರಿ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೊಡಗು ಮೂಲದ ಸಮೀರ್(32), ಫೈರೋಜ್ (24) ಬಂಧಿತರು. ಆರೋಪಿಗಳಿಂದ 103 ಕೆಜಿ ತೂಕದ 23 ರಕ್ತಚಂದನ ಮರದ ತುಂಡುಗಳು, 4525 ರೂ. ನಗದು, ಒಂದು ಕಾರು, ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೈಸೂರಿನಿಂದ ತಮಿಳುನಾಡಿನ ಕಡೆಗೆ ಕಾರಿನಲ್ಲಿ ರಕ್ತಚಂದನ ಮರದ ತುಂಡುಗಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿಜಯರಾಜ್ ತಂಡ ದಾಳಿ ನಡೆಸಿತು. ಟಗರಪುರ ಗ್ರಾಮದ ಸಮೀಪ ಕಾರನ್ನು ಅಡ್ಡಗಟ್ಟಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದರು.

ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಹೆಡ್ ಕಾನ್‌ಸ್ಟೆಬಲ್ ರಾಮಚಂದ್ರ, ತಕ್ಕಿವುಲ್ಲಾ, ಶಂಕರ್, ಬಸವರಾಜು, ಸ್ವಾಮಿ, ಕಾನ್‌ಸ್ಟೆಬಲ್ ಬಸವರಾಜು, ಚಾಲಕ ಪ್ರಭಾಕರ್ ಇದ್ದರು. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net