

ಚಿತ್ರದುರ್ಗ: ರಕ್ತ ಹೀನತೆ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪೌಷ್ಠಿಕಾಹಾರ ಸೇವನೆ ಮುಖ್ಯವೆಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಚಿತ್ರ ದುರ್ಗ ತಾಲೂಕು ಗುಡ್ಡದರಂಗವ್ವನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ,ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾಪಂ ಸಹ ಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ಪೋಷಣ್ ಅಭಿಯಾನದಲ್ಲಿ ಮಾತನಾಡಿ,ಗರ್ಭಿಣಿಯರು,ಬಾಣಂತಿಯರು ಪೌಷ್ಠಿಕಾಹಾರ ಸೇವನೆಯಿಂದ ರೋಗ ರುಜಿನಗಳಿಂದ ಪಾರಾಗಿ ಉತ್ತಮ ಆರೋಗ್ಯವನ್ನು ಪಡೆಯುವುದರೊಂದಿಗೆ,ಮಕ್ಕಳ ಬೆಳವಣಿಗೆ ಕೂಡ ಚೆನ್ನಾಗಿರುತ್ತದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೀತಾಂಜಲಿ ಹಾಗೂ ಕಾರ‌್ಯಕ್ರಮ ಸಂಯೋಜಕ ಸುನೀಲ್ ಮಾತನಾಡಿ,ಉತ್ತಮ ಆಹಾರ ಸೇವನೆ ಕುರಿತಂತೆ ವಿವರಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಈ ಅಭಿಯಾನ ದೇಶಾದ್ಯಂತ ಸೆ.1ರಿಂದ 2022ರಿಂದ 30ವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ವಾರಕ್ಕೊಂದು ವಿಷಯದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್,ಪ್ರಶಾಂತ್,ಅರೋಗ್ಯ ಸುರಕ್ಷತಾಧಿಕಾರಿ ಮಂಜುಳಾ ,ಗ್ರಾಪಂ ಕಾರ‌್ಯದರ್ಶಿ ವಿ.ತುರುವೇಶ್‌ರಾಧಮ್ಮ,ಪೂರ್ಣಿಮಾ,ಅರುಣಾ,ಶಿಲ್ಪಾ ಮತ್ತಿತರರು ಇದ್ದರು.
---