ಯಾದಗಿರಿ: ರಕ್ತ ಹೀನತೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಹೇಳಿದರು.
ತಾಲೂಕಿನ ಗಾಜರಕೊಟ್ ಗ್ರಾಮದಲ್ಲಿ ಹೆಪಟೈಟಿಸ್ ಮತ್ತು ತಾಯಿಹಾಲು ಸಪ್ತಾಹ ನಿಮಿತ್ತ ಆರೋಗ್ಯ ಅರಿವು ಕುರಿತು ಹಮ್ಮಿಕೊಂಡ ಆರೋಗ್ಯ ಮೇಲ ಉದ್ಘಾಟಿಸಿ ಮಾತನಾಡಿದ ಅವರು, ಗರ್ಭಿಣಿಯರು, ಬಾಣಂತಿಯರು ಹಾಗೂ ಹದಿಹರಿಯದ ಹೆಣ್ಣು ಮಕ್ಕಳು, ರಕ್ತ ಹೀನತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಹಾಗೊಂದು ವೇಳೆ ಕಂಡು ಬಂದಲ್ಲಿ ಹಸಿರು ತರಕಾರಿ, ಹಣ್ಣು-ಹಂಪಲು, ಮೊಳಕೆ ಕಾಳು ಮತ್ತು ಶೇಂಗಾ ಮತ್ತು ಬೆಲ್ಲವನ್ನು ಸೇವಿಸಬೇಕು ಎಂದರು.
ಸಾರ್ವಜನಿಕರು ಆರೋಗ್ಯ ಇಲಾಖೆಯ ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ಪಡೆದು, ಉತ್ತಮ ಆರೋಗ್ಯ ಹೊಂದುವ ನಿಟ್ಟಿನಲ್ಲಿ ಮೇಳದಲ್ಲಿ ಮಾಹಿತಿ, ತಪಾಸಣೆ, ಪರೀಕ್ಷೆ, ಚಿಕಿತ್ಸೆ, ಆರೋಗ್ಯ ದಿನಗಳ ಮಾಹಿತಿ ನೀಡಲಾಗುತ್ತದೆ. ಕಾರಣ ಸಾರ್ವಜನಿಕರು ಆರೋಗ್ಯ ಮೇಳದ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕಾ ಆರೋಗ್ಯ ಅಧಿಕಾರಿ ಡಾ.ಹನಮಂತ ರೆಡ್ಡಿ , ಜಿ¯್ಲÁ ಆರ್‍ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ.ಕೆ, ಜಿ¯್ಲÁ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೊತಿ ಕಟ್ಟಿಮನಿ, ಜಿ¯್ಲÁ ಮಲೇರಿಯಾ ಅಧಿಕಾರಿ ಡಾ.ಸಾಜೀದï, ಜಿ¯್ಲÁ P್ಷÀಯರೋಗ ನಿರ್ಮೂಲನಾ ಅಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ ಮಾತನಾಡಿದರು. ಡಾ.ಶಿವಪ್ರಸಾದ ಮೇತ್ರಿ, ಡಾ.ಭೀಮರೆಡ್ಡಿ ಡಾ.ಮಂಗಳ ಅನ್ವಾರ, ನೀಲಮ್ಮ, ಸುದರ್ಶನ,ರತ್ನಮ್ಮ, ರವಿ ಬಂಡಿ,ಅಬ್ದುಲ್‍ಅಜಿಜï, ಖಲಿಮುದ್ದಿನï, ರಾಜಕುಮಾರï ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಸ್ವರ ಸಾಮ್ರಾಟ್ ಜಾನಪದ ಕಲಾ ತಂಡದಿಂದ ಬೀದಿ ನಾಟಕ ಮೂಲಕ ಅರಿವು ಮೂಡಿಸಲಾಯಿತು. ಜಿ¯್ಲÁ ಆರೋಗ್ಯ ಶಿP್ಷÀಣಾಧಿಕಾರಿ ತುಳಸಿರಾಮ ಚವ್ಹಾಣ್ ಕಾರ್ಯಕ್ರಮದ ನಿರೂಪಿಸಿದರು. ಕವಿತಾ ಸ್ವಾಗಿತಿಸಿ, ವಂದಿಸಿದರು.