ರಕ್ತ ಸಂಚಲನ ಆಗದಿದ್ದರೆ ಅನಾರೋಗ್ಯ

0902KLB07
Published on

ಕಲಬುರಗಿ: ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಕ್ರಮಬದ್ದವಾಗಿ ಆಗದಿದ್ದರೆ ಅನಾರೋಗ್ಯ ಉಂಟಾಗುತ್ತದೆ. ಕೆಲಸ, ನಡಿಗೆ, ಫೂಟ್, ಪಲ್ಸ್ ಥೆರೆಪಿ ಚಿಕಿತ್ಸೆಯಿಂದ ರಕ್ತ ಸಂಚಾರ ಆಗುತ್ತದೆ ಎಂದು ಡಾ.ಲತಾ ವೆಂಕಟೇಶ ಹೇಳಿದರು.

ಸೇಡಂ ರಸ್ತೆ ವಿದ್ಯಾ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಪಾನಿಯೋ ಹಾಗೂ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯಿಂದ ಹಮ್ಮಿಕೊಂಡ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಕಾರ್ಯಾಗಾರದಲ್ಲಿ ಮಾತನಾಡಿ, ಆರೋಗ್ಯದತ್ತ ಗಮನ ಹರಿಸಬೇಕು ಎಂದರು.

ಫಿಜಿಯೋಥೆರೆಪಿಸ್ಟ್ ಹಣಮಂತ ಹಾಗೂ ಭೀಮಾಶಂಕರ ಶಿಬಿರಕ್ಕೆ ಬಂದವರಿಗೆ ಥೆರೆಪಿ ಪ್ರಾಮುಖ್ಯತೆ ವಿವರಿಸಿದರು. ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಮಲ್ಲಿನಾಥ ದೇಶಮುಖ, ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷ ರತ್ನಾಬಾಯಿ ನಿಂಬೂರ, ಕೌಶಿಕ, ನಾಗೇಂದ್ರ, ಸುಭಾಷ ಮಂಟಾಳೆ, ನಾಗರಾಜ ಹೆಬ್ಬಾಳ, ಬಸವಂತರಾವ ಜಾಬಶೆಟ್ಟಿ, ನಾಗಭೂಷಣ ಹಿಂದೊಡ್ಡಿ, ಶಾಂತಯ್ಯ ಬೀದಿಮನಿ, ಜಗನ್ನಾಥ ಚಿದ್ರಿ, ಗಣಪತರಾವ ನಿಲೇಗಾರ, ಶರಣಯ್ಯ ಮಠಪತಿ, ಮಲ್ಲಿಕಾರ್ಜುನ ಕಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net