ರಕ್ತ ದಾನ ಮಾಡಿ ರೋಗಿಗಳ ಜೀವ ಉಳಿಸಿ

kdr sanmana
ಕಡೂರಿನಲ್ಲಿ ಜೆಸಿ ಸ್ವರ್ಣಶ್ರೀ ಘಟಕದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ಆಶಾ ಶ್ರೀನಿವಾಸ್‌ಮೂರ್ತಿ, ಅಕ್ಷಯ್‌ಕುಮಾರ್, ಸುಜಾತಾ ಶಿವಕುಮಾರ್, ಮೀನಾ ಪ್ರಸನ್ನ ಮತ್ತಿತರರಿದ್ದರು.
Published on

ಕಡೂರು: ರಕ್ತ ಸಂಗ್ರಹದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಜೆಸಿಐ ಭವನದಲ್ಲಿ ಭಾನುವಾರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಜೆಸಿ ಕಡೂರು ಸ್ವರ್ಣಶ್ರೀ ಘಟಕ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತದಾನ ಶ್ರೇಷ್ಠ. ರೋಗಿಯ ಜೀವ ಉಳಿಸುವ ಸಲುವಾಗಿ ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡಬೇಕು. ಇದರಿಂದ ರಕ್ತ ದಾನಿಯ ಆರೋಗ್ಯವೂ ವೃದ್ಧಿಸುತ್ತದೆ. ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುವ ಪಟ್ಟಣದ ಸಂಘ ಸಂಸ್ಥೆಗಳೊಂದಿಗೆ ಪುರಸಭೆಯ ಬೆಂಬಲ ನಿರಂತರವಾಗಿರಲಿದೆ ಎಂದರು. ಜೆಸಿಐ ಕಡೂರು ಸ್ವರ್ಣಶ್ರೀ ಘಟಕದ ಅಧ್ಯಕ್ಷೆ ಆಶಾ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಸಾಮಾಜಿಕ ಕಳಕಳಿಯೊಂದಿಗೆ ಕಡೂರು ಘಟಕ ಇಂಥ ಶಿಬಿರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದು, ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಾಗಿ ರಕ್ತದಾನಕ್ಕೆ ಒತ್ತು ಕೊಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. 25ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಜೆಸಿಐ ವಲಯ ಉಪಾಧ್ಯಕ್ಷ ಅಕ್ಷಯ್‌ಕುಮಾರ್, ವೀಣಾ ಚೇತನ್, ವಾಣಿ, ಮೀನಾ ಪ್ರಸನ್ನ, ಅರುಣ್‌ಕುಮಾರ್, ಭಾಗ್ಯಾ ಮೇರಿ, ಸುಜಾತಾ ಶಿವಕುಮಾರ್, ಗೋಪಾಲಕೃಷ್ಣ, ಶೋಭಾ ನಾಗೇಂದ್ರ, ಅನಿತಾ ಕಿರಣ್, ರೂಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net