ರಂಭಾಪುರಿ ಶ್ರೀಗಳ ಜನ್ಮದಿನದ ಅಂಗವಾಗಿ ಹಣ್ಣು ವಿತರಣೆ

7 ckm 6
ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಜನ್ಮ ದಿನದ ಅಂಗವಾಗಿ ಚಿಕ್ಕಮಗಳೂರಿನ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ವೀರಶೈವ ಬ್ರಿಗೇಡ್ ಮುಖಂಡರು ಹಣ್ಣು ವಿತರಣೆ ಮಾಡಿದರು.
Published on

ಚಿಕ್ಕಮಗಳೂರು: ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ೬೯ನೇ ಜನ್ಮದಿನದ ಪ್ರಯುಕ್ತ ನಗರದ ಜೀವನಸಂಧ್ಯಾ ವೃದ್ದಾಶ್ರಮದಲ್ಲಿ ಮಂಗಳವಾರ ವೀರಶೈವ ಬ್ರಿಗೇಡ್‌ನ ಮುಖಂಡರುಗಳು ಹಣ್ಣು- ಹಂಪಲು ವಿತರಿಸುವ ಮೂಲಕ ಗುರುಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ವೇಳೆ ಮಾತನಾಡಿದ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷÀ ಚಂದ್ರಮೌಳಿ, ರಂಭಾಪುರಿ ಪೀಠದ ಮೂಲ ನುಡಿ ಮಾನವ ಧರ್ಮಕ್ಕೆ ಜಯವಾಗಲಿ ಎಂಬುದಾಗಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಂತ್ರವನ್ನು ವಿಸ್ತಾರವಾಗಿ ಸಾರಿವರು ರಂಭಾಪುರಿ ಗುರುಗಳು ಎಂದರು.

ವೀರಶೈವ ಸಮಾಜದ ಮುಖಂಡ ಈಶ್ವರಪ್ಪ ಕೋಟೆ ಮಾತನಾಡಿ ವೃದ್ಧಾಶ್ರಮದಲ್ಲಿ ಇರುವವರು ಅನಾಥರಲ್ಲ. ಅವರೆಲ್ಲರೂ ಸಮಾಜದ ಬಂಧುಗಳು ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮುಖಂಡರಾದ ಓಂಕಾರಸ್ವಾಮಿ, ವೀರೇಶ್, ಅಶೋಕ್, ಅಶೋಕ್ ಕುಮಾರ್, ದರ್ಶನ್, ಜಯಪ್ರಕಾಶ್, ಕಾಂತಣ್ಣ, ಪಂಚಣ್ಣ, ಕುಮಾರಸ್ವಾಮಿ, ಚೇತನ್, ಜಯಪ್ರಕಾಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net