ರಂಗೋಲಿ ನಮ್ಮ ದೇಶದ ಸಂಸ್ಕೃತಿ

ydg04
Published on

ಕೊಡೇಕಲ್: ರಂಗೋಲಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ ಎಂದು ನೇಕಾರ ಒಕ್ಕೂಟಗಳ ಜಿಲ್ಲಾಧ್ಯಕ್ಷ ವೀರಸಂಗಪ್ಪ ಹಾವೇರಿ ಹೇಳಿದರು.

ಗ್ರಾಮದ ಬಸವೇಶ್ವರ ಗಜಾನನ ಸಮಿತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ರಂಗೋಲಿ ಕಲೆ ನಮ್ಮ ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಬೆಳಗಿನ ಜಾವ ಮನೆಯಂಗಳದಲ್ಲಿ ರಂಗೋಲಿ ಮರೆಯಾಗುತ್ತಿರುವುದಕ್ಕೆ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿz್ದೆÃವೆ ಎಂಬ ಸಂಕೇತ ಸೂಚಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರತಿ ವರ್ಷ ಗಣೇಶ ಹಬ್ಬದ ನಿಮಿತ್ತ ಯುವಕರು ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಆಯೋಜಿಸುವ ಮೂಲಕ ಅವರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

ಸAಗಣ್ಣ ಮಹಲಿನಮಠ, ಪ್ರಭುಸ್ವಾಮಿ ಕೊಡೇಕಲ್ಮಠ, ವಿ.ಎಸ್.ಹಾವೇರಿ, ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ಈರಸಂಗಯ್ಯ ದೊಡ್ಡೆಗೋಳ, ಕೋರಿಸಂಗಯ್ಯ ಗಡ್ಡದ, ಚಂದ್ರಶೇಖರ ಹೋಕ್ರಾಣಿ, ವಿರೇಶ ಮುತ್ತಗಿ, ಸಂತೋಷ ಕೊಡೇಕಲ್ಮಠ, ತಿಪ್ಪಣ್ಣ ದ್ಯಾಮನಾಳ, ಬಸಣ್ಣ ಬಾವೂರ ಇತರರಿದ್ದರು. ಬಸವರಾಜ ಭದ್ರಗೋಳ ನಿರೂಪಣೆ ಮಾಡಿದರು. ಕರ‍್ಯಕ್ರಮಕ್ಕೂ ಮುನ್ನ ದೇವಸ್ಥಾನ ಆವರಣದಲ್ಲಿ ೩೦ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net