ರಂಗೋಲಿಯಲ್ಲಿ ಅರಳಿದ ರಾಷ್ಟ್ರಧ್ವಜ

h13-Rangoli 1
Published on

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದಿಗಂಬರ ಜೈನ ಮಹಿಳಾ ಸಮಾಜದ ಸದಸ್ಯೆಯರು ನಗರದ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ರಂಗೋಲಿಯಲ್ಲಿ ರಾಷ್ಟ್ರಧ್ವಜವನ್ನು ಬಿಡಿಸುವ ಮೂಲಕ ಗಮನ ಸೆಳೆದರು.

ಕಲಾವಿದ ದಿನೇಶ ಚಿಲ್ಲಾಳ ಅವರ ಸಲಹೆ , ಸಹಕಾರದಿಂದ ದೊಡ್ಡದಾದ ತ್ರಿವರ್ಣ ಧ್ವಜವು ರಂಗೋಲಿಯಲ್ಲಿ ಮೂಡಿ ಬಂದಿತು. ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಭಾರತ ಮಾತಾ ಕೀ ಜೈ ಎಂದು ಘೊಷಣೆ ಕೂಗಿದರು.

ಸಮಾಜದ ಅಧ್ಯಕ್ಷೆ ತ್ರಿಶಾಲ ಮಾಲಗತ್ತಿ ಮಾತನಾಡಿ, ವೀರ ಯೋಧರ ತ್ಯಾಗ ಬಲಿದಾನದ ಪ್ರತಿಫಲವಾಗಿ ಇಂದು ನಾವು ಸ್ವಾತಂತ್ರ್ಯ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದೇವೆ. ಕೃಷಿಯೆ ಆಧಾರವಾಗಿರುವ ದೇಶ ಇಂದು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು. ದಿನೇಶ ಚಿಲ್ಲಾಳ ಅವರನ್ನು ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net