‘ರಂಗಿನ ರಾಟೆ’ ಉತ್ತಮ ಪ್ರದರ್ಶನ

Published on

ಮೈಸೂರು: ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ‘ರಂಗಿನ ರಾಟೆ’ ಚಿತ್ರ ಸಿದ್ಧವಾಗಿದ್ದು ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರದ ನಿರ್ದೇಶಕ ಆರ‌್ಮುಗಂ ತಿಳಿಸಿದರು.
ನಾಲ್ಕು ಜನರ ಸುತ್ತ ಸಾಗುವ ಕತೆ ಮನೋಜ್ಞವಾಗಿ ಮೂಡಿ ಬಂದಿದೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ತಾರಾಗಣದಲ್ಲಿ ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ, ಸಂತೋಷ್ ಇತರರು ಇದ್ದಾರೆ. ಕವಿತಾ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net