ರಂಗಾಯಣದಿಂದ ಸಿರಿಪುರಂದರ ನಾಟಕ ಪ್ರದರ್ಶನ

1211Klb010
Published on

ಕಲಬುರಗಿ: ದಾಸ ಶ್ರೇಷ್ಠ ಪುರಂದರ ದಾಸರ ಜೀವನ ಸಾಧನೆ ಬಿಂಬಿಸುವ ಮತ್ತು ದಾಸ ಸಾಹಿತ್ಯದಲ್ಲಿನ ಸಮಾಜಿಕ ಕಳಕಳಿ ಬಿಂಬಿಸುವಂತಿತ್ತು. ಪುರಂದರ ದಾಸರು ಎಂದರೆ ಕೇವಲ ಭಕ್ತಿ ಪಂಥಕ್ಕೆ ಸೀಮಿತಗೊಳಿಸಲಾಗಿದೆ ಎಂಬ ಮಾತಿದೆ. ಕಲಬುರಗಿ ರಂಗಾಯಣ ಈ ಮಾತನ್ನು ಅಲ್ಲ ಗಳೆದು ದಾಸರು ಸಾಮಾಜಿಕ ಕಳಕಳಿ ಹೊಂದಿದ್ದರು ಎಂಬುದನ್ನು ನಾಟಕ ಪ್ರದರ್ಶನ ಮೂಲಕ ತೋರಿಸಿ ಕೊಟ್ಟಿತು.
ಕಲಬುರಗಿ ರಂಗಾಯಣದಲ್ಲಿ ಸಿರಿ ಪುರಂದರ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಾಟಕಕ್ಕೆ ಚಾಲನೆ ನೀಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ, ರಂಗಭೂಮಿಯ ಹಿನ್ನೆಲೆಯುಳ್ಳವರು ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕಲ್ಯಾಣ ಕನರ್ಾಟದಲ್ಲಿ ರಂಗ ಚಟುವಟಿಕೆಗಳ ಮೂಲಕ ನಮ್ಮ ಭಾಗದ ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತಿಕೆಗೊಳಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು, ಬೆಂಗಳೂರಿನ ರಂಗಾಯಣದಂತೆ ಕಲ್ಬುಗರ್ಿ ರಂಗಾಯಣವು ಪ್ರಗತಿ ಸಾಧಿಸಬೇಕು. ಈ ಭಾಗದಲ್ಲಿ ಕಲಾವಿದರ ಕೊರತೆಯಿಲ್ಲ. ಸೂಕ್ತ ವೇದಿಕೆ ಸಿಗುತ್ತಿಲ್ಲ. ರಂಗಾಯಣವು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಸಿರಿ ಪುರಂದರ ನಾಟಕ ಪ್ರದಶರ್ಿಸಿದ್ದನ್ನು ಶ್ಲಾಘಿಸಿದರು.
ನಾಟಕ ನಿದರ್ೇಶಕ ಮಹಾದೇವ ಹಡಪದ, ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕಣರ್ಿ, ಶಂಕ್ರಯ್ಯ ಘಂಟಿ, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ವಾಸುದೇವ ಅಗ್ನಿಹೋತ್ರಿ, ಮುಖಂಡರಾದ ಪ್ರಹ್ಲಾದ ಪೂಜಾರಿ, ಮಹೇಶ ದೇಶಪಾಂಡೆ ಹಾಗೂ ಕಲಾವಿದರು ಪಾಲ್ಗೊಂಡಿದ್ದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net