ರಂಗಾಯಣದ ಅಂಗಳದಲ್ಲಿ ಚಿಣ್ಣರ ಸಂತೆ ಕಾರುಬಾರು!

11
Published on

ಮಾವಿನಕಾಯಿ, ಪಪ್ಪಾಯ, ಟೊಮ್ಯಾಟೊ, ಸೊಪ್ಪು, ತರಕಾರಿ…!


ಇವು ಮಾರುಕಟ್ಟೆಯಲ್ಲಿ ಕೇಳಿಬಂದ ಶಬ್ದಗಳಲ್ಲ, ರಂಗಾಯಣದ ಅಂಗಳದಲ್ಲಿ ಗ್ರಾಹಕರನ್ನು ಮೋಡಿ ಮಾಡಿದ ಸಾಲುಗಳು.
ಚಿಣ್ಣರ ಮೇಳ ಬೇಸಿಗೆ ಶಿಬಿರದ ಪ್ರಯುಕ್ತ ರಂಗಾಯಣ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಚಿಣ್ಣರ ಸಂತೆ’ ಅಕ್ಷರಶಃ ಮಾರುಕಟ್ಟೆಯಾಗಿ ರೂಪಾಂತರಗೊಂಡಿತ್ತು.


ತರಕಾರಿ, ತಿಂಡಿ-ತಿನಿಸು, ಆಟಿಕೆ, ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಪುಟಾಣಿಗಳು ವ್ಯಾಪಾರಿಗಳನ್ನು ಮೀರಿಸುವ ಚಾಕಚಕ್ಯತೆ ಮೆರೆದು ಗಮನ ಸೆಳೆದರು. ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಭರ್ಜರಿ ವ್ಯಾಪಾರ ನಡೆಯಿತು.


ವಿವಿಧ ಪದಾರ್ಥಗಳನ್ನು ಮಾರಾಟ ಮಾಡಿದ ಮಕ್ಕಳು ಮಾರಾಟದಿಂದ ಬಂದ ಹಣವನ್ನು ಎಣಿಸುವತ್ತ ಗಮನಹರಿಸಿದರೆ, ಇನ್ನುಳಿದಂತೆ ಅನೇಕ ಮಕ್ಕಳು ತಾವೇ ಮಾರಾಟಕ್ಕೆ ಇಟ್ಟಂತಹ ಪದಾರ್ಥಗಳನ್ನು ತಿನ್ನುವುದರಲ್ಲಿ ಮಗ್ನರಾಗಿದ್ದರು.


ರಂಗಾಯಣದ ಮುಖ್ಯದ್ವಾರದಿಂದ ವನರಂಗದವರೆಗಿನ ದಾರಿಯುದ್ದಕ್ಕೂ ಮಕ್ಕಳು ಮಳಿಗೆ ತೆರೆದಿದ್ದರು. ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಮೇಣದ ಬತ್ತಿ, ಮೊಳಕೆಕಾಳು, ಪಾನಿಪುರಿ, ಚುರುಮುರಿ, ಸೊಪ್ಪು-ತರಕಾರಿ ಸೇರಿದಂತೆ ಸಂತೆಯಲ್ಲಿ ಸಿಗುವ ಎಲ್ಲ ವಸ್ತುಗಳು ಇಲ್ಲಿನ ಅಂಗಡಿಯಲ್ಲಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net